ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 69
ಗುರುಭಿಕ್ಷೆ ಎಂದರೆ....
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಭರಮ ಸಾಗರದ ನೀಲಕಂಠ ಜೋಯಿಸರು ಗುರುನಾಥರನ್ನು ಕಾಣಲು ಹೊರಟರಂತೆ ಸಖರಾಯಪಟ್ಟಣಕ್ಕೆ. ಬೆಂಗಳೂರಿನ ನಮ್ಮ ಗೋಪಾಲಕೃಷ್ಣ - ಚಂದ್ರಣ್ಣನ ಮನೆಗೆ ಆಗಾಗ್ಗೆ ಬರುತ್ತಿದ್ದ ಅವಧೂತರನ್ನು ನೋಡಲು ಹೋಗುತ್ತಿದ್ದವರು, ಅವಧೂತರ ಲೀಲೆಗಳನ್ನು ನೀಲಕಂಠ ಜೋಯಿಸರ ಮುಂದೆ ಹೇಳಿದುದಷ್ಟೇ ಅಲ್ಲ, ಅವರ ಸರಳಾತಿಸರಳ ರೀತಿಗಳು, ಎಲ್ಲರಲ್ಲಿಯೂ ಭಗವಂತನನ್ನು ಕಾಣುವ ವಿಶಾಲ ಸ್ವಭಾವ, ಎಲ್ಲರಿಗೂ ಬೇಧಭಾವವಿಲ್ಲದೇ ನಮಿಸುವ ವಿನಮ್ರ ಮಹಾನತೆಯ ಭಾವವನ್ನು ವಿವರಿಸಿದ್ದರಂತೆ. ಹಾಗಾಗಿ ನೀಲಕಂಠ ಜೋಯಿಸರಿಗೆ ಆ ಮಹಾತ್ಮ ಗುರುನಾಥರನ್ನು ಕಾಣುವ ಅದಮ್ಯ ಬಯಕೆ ಹೆಮ್ಮರವಾಗಿ ಫಲ ಬಿಟ್ಟಿದ್ದರಿಂದಲೇ ಅವರು ಅಂದು ತಮ್ಮನ ಜೊತೆ ಗುರುದರ್ಶನಕ್ಕೆ ಹೊರಟರು. ಮುಂದೇನಾಯಿತು ಎಂದು ಅವರ ಮಾತುಗಳಲ್ಲೇ ಕೇಳೋಣ ನಿತ್ಯ ಸತ್ಸಂಗಾಭಿಮಾನಿ ಗುರುಭಕ್ತರೆ.
'ಗುರುನಾಥರನ್ನು ಕಾಣುವ ತವಕದಿಂದ ಗುರು ಮನೆಗೆ ಬಂದೆವು. ನಮ್ಮ ಪುಣ್ಯ ಗುರುನಾಥರು ಊರಿನಲ್ಲಿದ್ದರು. ಮೊದಲೇ ನಮ್ಮ ತಮ್ಮ ಗುರುನಾಥರೊಂದಿಗೆ ಹೇಗೆ ವರ್ತಿಸಬೇಕು ಎಂದು ತಿಳಿಸಿದ್ದ. ಒಳಗೆ ನಾವು ಹೋದೆವು. ಗುರುನಾಥರು ಬಹಳ ಆದರದಿಂದ 'ಬನ್ನಿ ಬನ್ನಿ' ಎಂದು ಕರೆದರು. ನಮಗೆ ನಮಸ್ಕಾರ ಮಾಡಲು ಬಂದರು. ಆದರೆ ಮಹಾತ್ಮರ ದರ್ಶನ ಮಾಡಲು ಬಂದ ನಾವು ಮೊದಲು ಅವರ ಕಾಲುಗಳನ್ನು ಹಿಡಿದು ನಮಸ್ಕರಿಸಿದೆವು. ಅವರ ಪಾದ ಸ್ಪರ್ಶದಿಂದ ನಮ್ಮ ಜನ್ಮ ಸಾರ್ಥಕವಾದಂತಾಯಿತು. ಮುಂದೆ ಕಾಲು ತೊಳೆದುಕೊಳ್ಳಲು ಬಚ್ಚಲು ಮನೆಯತ್ತ ಕರೆದೊಯ್ದರು. ನಾವು ಕಾಲು ತೊಳೆದು ಹೊರ ಬರುವಲ್ಲಿ, ಗುರುನಾಥರು ಟವೆಲು ಹಿಡಿದುಕೊಂಡು ನಮ್ಮ ಕಾಲು ಒರೆಸಲು ಸಿದ್ಧವಾಗದ್ದರು. ಬಹಳ ಪ್ರಯತ್ನ ಪಟ್ಟು ಟವೆಲು ತೆಗೆದುಕೊಂಡು ನಾವೇ ನಮ್ಮ ಕಾಲುಗಳನ್ನು ಒರೆಸಿಕೊಳ್ಳುವಲ್ಲಿ ಹರ ಸಾಹಸ ಮಾಡಬೇಕಾಯಿತು. ಗುರುನಾಥರ ಸರಳಾತಿಸರಳ ನಡೆ ನುಡಿಗಳು, ಅವರೊಬ್ಬ ಸಿದ್ಧ ಪುರುಷರಾಗಿಯೂ, ಬಂದ ಭಕ್ತರ ಸೇವೆಗೆ ಸಿದ್ಧರಾಗಿ ನಾನೇನೂ ಅಲ್ಲ - ಎಂಬ ನಿರ್ಲಿಪ್ತ ಭಾವದ ಅವರ ನಡೆ ನುಡಿಗಳು, ಅತ್ಯಂತ ಸರಳ ಮಾನವೀಯ ಸ್ಪಂದನಗಳು ನಮ್ಮ ಮೇಲೆ ತುಂಬಾ ಪ್ರಭಾವ ಬೀರಿತು. ಮುಂದೆ ನಮ್ಮನ್ನು ದೇವರ ಮನೆಯ ಒಳಗೆ ಕರೆ ತಂದು, ದೇವರ ಮುಂದೆ ಮಣೆ ಹಾಕಿ ಕೂರಿಸಿ, ಮನೆಯವರನ್ನೆಲ್ಲಾ ಕರೆದು 'ಏ ಎಲ್ಲರೂ ಬನ್ನಿ... ಶಂಕರಲಿಂಗ ಭಗವಾನರ ಭಕ್ತರು ಬಂದಿದ್ದಾರೆ.... ಆರತಿ ಮಾಡಿ... ನಮಸ್ಕಾರ ಮಾಡಿಬನ್ನಿ' ಎಂದು ಎಲ್ಲರನ್ನೂ ಕರೆದರು. ಗುರುನಾಥರ ನುಡಿಯಂತೆ ಎಲ್ಲವೂ ನಡೆಯಿತು. ನಮಗಂತೂ ಅತ್ಯಂತ ಮುಜುಗರ ಒಂದೆಡೆಯಾದರೆ, ಮನದಲ್ಲಿ 'ಗುರುದೇವಾ ನಿಮ್ಮನ್ನು ಸೇವಿಸಿ ನಮ್ಮ ಜನ್ಮ ಸಾರ್ಥಕ ಮಾಡಿಕೊಳ್ಳೋಣವೆಂದು ಬಂದರೆ... ಇದೇನಪ್ಪಾ ನಿನ್ನ ಲೀಲೆ' ಎಂದು ಪ್ರಾರ್ಥಿಸುವುದಲ್ಲದೆ ಇನ್ನೇನೂ ಮಾಡುವಂತಿರಲಿಲ್ಲ. ನಂತರ ತುಂಬಾ ಪ್ರೀತಿಯಿಂದ ಊಟ ಮಾಡಿಕೊಂಡು ಹೋಗಿರೆಂದರು. ಎರಡು ದಿನವಿದ್ದು ಹೋಗಿ.... ಎಂದರು.... ಆದರೆ ನಮಗೆ ಬೇರೇನೋ ಕೆಲಸವಿದ್ದುದರಿಂದ ಉಳಿಯಲಾಗಲಿಲ್ಲ... ಹೀಗೆ ಮಾತನಾಡದೆ ಅನೇಕ ಉಪದೇಶಗಳನ್ನು ಗುರುನಾಥರು ನೀಡಿದರೆನ್ನಬೇಕು. ನಿಜವಾದ ಅರ್ಥದಲ್ಲಿ ಗುರುದರ್ಶನವಾಯಿತು. ಅದು ಅನೇಕ ಸಾರಿ ಮುಂದುವರೆದದ್ದು ನನ್ನ ಪೂರ್ವ ಜನ್ಮದ ಪುಣ್ಯ' ಎನ್ನುತ್ತಾರೆ ಆ ಭಕ್ತರು.
ಕೋಮಾರನಹಳ್ಳಿಯ ಗುರು ಮಠಕ್ಕೆ ನಡೆದುಕೊಳ್ಳುವ ನಾವು, ಆರಾಧನೆಯ ಹಿಂದಿನ ದಿನ 'ಗುರು ಭಿಕ್ಷೆ'ಯ ದಿನವಾಗಿ ಆಚರಿಸುವುದನ್ನು ಕಂಡಿದ್ದೆವು. ಅಲ್ಲಿನ ಒಂದು ಚೀಲದಲ್ಲಿ ಅಕ್ಕಿ ಇಟ್ಟಿರುತ್ತಿದ್ದರು. ಸಾಲಿನಲ್ಲಿ ಹೋಗಿ.... ಅಲ್ಲಿ ನೇತು ಹಾಕಿರುವ ಜೋಳಿಗೆಗೆ ಒಂದು ಮುಷ್ಠಿ ಅಕ್ಕಿ ಹಾಕಿ, ಕೈಲಿದ್ದವರು ತಮಗೆ ತಿಳಿದಷ್ಟು ಹಣವನ್ನೋ, ತಾವು ತಂದ ಹಣ್ಣು ಕಾಯಿಯನ್ನೋ ಅರ್ಪಿಸಿ ಬರುವುದೇ ಗುರುಭಿಕ್ಷೆ ಎಂದು ಭಾವಿಸಿದ್ದೆವು. ಬಹಳ ವರ್ಷಗಳ ಹಿಂದೆ ನಿತ್ಯ ಜೋಳಿಗೆಗೆ ಗುರುಭಿಕ್ಷೆ ಹಾಕಲು ಮನೆ ಮನೆಗೆ, ಜೋಳಿಗೆಗಳನ್ನು ಆಶೀರ್ವಾದ ಮಾಡಿ ಕೊಟ್ಟಿದ್ದರು. ಪ್ರತಿನಿತ್ಯ ಬೆಳಗ್ಗೆ ಎದ್ದು ಒಂದು ಮುಷ್ಠಿ ಅಕ್ಕಿಯೋ, ಜೋಳವೋ, ರಾಗಿಯೋ, ಅದಕ್ಕೆ ಹಾಕಿ (ಅವರವರು ಉಪಯೋಗಿಸುವ ಧಾನ್ಯಗಳು) ಅದನ್ನು ತಿಂಗಳಿಗೋ, ತುಂಬಿದಾಗಲೋ ಗುರುಮಠಕ್ಕೆ ತಲುಪಿಸುವ ಗುರುಭಿಕ್ಷಾ ಪದ್ಧತಿಯೂ ಕೆಲವರಿಗೆ ನೆನಪಿರಬಹುದು.
ಗುರುಭಿಕ್ಷೆಗೊಂದು ಹೊಸ ರೂಪ ಕೊಟ್ಟವರು ಗುರುನಾಥರು. ಗುರುನಾಥರ ಗುರುಭಿಕ್ಷಾ ಸ್ವರೂಪ ಕಂಡ ಜೋಯಿಸರ ಅನುಭವವನ್ನು ಕೇಳೋಣ, ಬನ್ನಿ ಭಗವದ್ಭಕ್ತರೇ.....
"ಒಂದು ಸುಮಾರು ಎರಡು ಮೂರು ಫರ್ಲಾಂಗುಗಳ ದೂರದವರೆಗೆ ತಲೆಯ ಮೇಲೆ ದೊಡ್ಡ ದೊಡ್ಡ ತಟ್ಟೆಗಳಲ್ಲಿ, ಬುಟ್ಟಿಗಳಲ್ಲಿ, ಚೀಲಗಳಲ್ಲಿ ಹಣ್ಣು ಹಂಪಲುಗಳನ್ನು ಬೆಲ್ಲ ಸಕ್ಕರೆಗಳನ್ನು, ದವಸ ಧಾನ್ಯಗಳನ್ನು ಹೊತ್ತು ನಿಂತಿದ್ದ ಜನರನ್ನು ಸಖರಾಯಪಟ್ಟಣದಲ್ಲಿ ಅಂದು ಕಂಡೆ. ಶೃಂಗೇರಿಯ ಜಗದ್ಗುರುಗಳು ಬಂದಿರುವ ವಿಚಾರ ತಿಳಿದು ನಾವುಗಳೆಲ್ಲಾ ಅಲ್ಲಿಗೆ ಬಂದಿದ್ದೆವು. ಯಾಕೆ ಹೀಗೆ ಈ ಜನ ನಿಂತಿದ್ದಾರೆಂದು ಕೇಳಿದಾಗ ತಿಳಿದ ವಿಚಾರ ಗುರುಭಿಕ್ಷೆಯನ್ನು ಸಲ್ಲಿಸಲು - ಎಂದು ತಿಳಿಯಿತು. ಹೀಗೂ ಗುರುಭಿಕ್ಷೆ ಕೊಡುವವರೂ ಉಂಟೇ? ಎಂಬ ಅರಿವಾಯಿತು. ಪ್ರತಿಯೊಬ್ಬರ ಮುಖ ಭಾವದಲ್ಲಿ ಹೊರೆ ಹೊತ್ತು ನಿಂತ ಭಾರದ ಭಾವವಿಲ್ಲದೇ, ಒಂದು ಸ್ತುತ್ಯ ಕಾರ್ಯ ಮಾಡುತ್ತಿರುವ ಧನ್ಯತಾಭಾವ ಕಂಡು ಬರುತ್ತಿತ್ತು. ಮುಂದೆ ವಿಚಾರಿಸಿದಾಗ ತಿಳಿದ ಸಂಗತಿ ಎಂದರೆ - ಇದೆಲ್ಲಾ ಸಖರಾಯಪಟ್ಟಣದ ಗುರುನಾಥರು ಹಾಕಿಕೊಟ್ಟ, ತಿಳಿಸಿದ ಸನ್ಮಾರ್ಗ. ಅದರಲ್ಲಿ ಸಹಸ್ರಾರು ಭಕ್ತರೀಗ ಸಾಗುತ್ತಿರುವುದು, ಗುರುವೆಂದರೆ ಬರಿಗೈಲಿ ಹೋಗಿ ನಮಿಸಿ, ಮಂತ್ರಾಕ್ಷತೆ ಪಡೆದು ಪ್ರಸಾದ ಸ್ವೀಕರಿಸಿ ಬರುವುದಲ್ಲ... ಒಳ್ಳೆಯದನ್ನು, ಹೆಚ್ಚಿನದನ್ನು, ಉತ್ತಮವಾದುದನ್ನು ಗುರುವಿಗೆ ಅರ್ಪಿಸುವುದೇ ಗುರುಭಿಕ್ಷೆಯ ನಿಜವಾದ ರೂಪವೆಂದು ಅವರು ನಿರೂಪಿಸಿದ್ದರು. ಅದರ ಫಲವೇ ಅಂದು ಕಂಡ ದೃಶ್ಯ. ಜಗದ್ಗುರುಗಳು ಬಂದು ವಾಪಸ್ಸು ಶೃಂಗೇರಿಗೆ ಹೋಗುವಾಗ ಅದೆಷ್ಟು ವಾಹನಗಳಲ್ಲಿ ಈ ಎಲ್ಲಾ ಭಿಕ್ಷೆ ತುಂಬಿಕೊಂಡು ಸಾಗುತ್ತಿತ್ತೋ, ನೋಡಿದವರಿಗೆ ತಿಳಿಯುತ್ತದೆ. ಇಷ್ಟೆಲ್ಲಾ ಅದೆಲ್ಲಿಂದ ಬಂತು? ಅದೆಷ್ಟು ಖರ್ಚಾಗಿತ್ತು. ಅದೆಷ್ಟು ಕೊಡುಗೈ ದಾನವನ್ನು ಭಕ್ತರಿಗೆ ನೀಡಿದ್ದರು, ಅದೆಂತಹ ಅತಿಥಿ ಸತ್ಕಾರಗಳಾಗಿದ್ದವು... ಇವನ್ನೆಲ್ಲಾ ಕುರಿತು ಲೆಕ್ಕ ಮಾಡಲಸಾಧ್ಯ. ಅನಂತವಾದ ಸೃಷ್ಠಿಯಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಆದರೆ ಅದನ್ನು ಪಡೆಯುವ ಸಾಮರ್ಥ್ಯ, ಅದರ ಸದ್ಭಳಕೆಯ ಬುದ್ಧಿ ಆ ಗುರುನಾಥರಿಂದ, ಅವರ ಕೃಪೆಯಿಂದ ಪಡೆಯಬೇಕು - ಆದಲ್ಲಿ ಕಂಡು ಧನ್ಯರಾಗಿದ್ದೆವು' ಎನ್ನುತ್ತಾರೆ ಭರಮಸಾಗರದ ಜೋಯಿಸರು.
ಪ್ರಿಯ ಗುರು ಬಾಂಧವರೇ, ನಿತ್ಯ ಸತ್ಸಂಗದಲ್ಲಿ ನಿರತರಾಗಿ ಅದೆಷ್ಟು ಸಂಗತಿಗಳು ನಮಗೆ ಲಭ್ಯವಾಗುತ್ತಿದೆಯಲ್ಲಾ, ಈ ಗುರುಲೀಲಾಮೃತ ನಿರಂತರವಾಗಿ ಹರಿಯಲಿ, ಗುರುಭಕ್ತರ ಸದ್ವಿಚಾರ, ಸದನುಭವ ನಿತ್ಯ ಸಿಗಲಿ.... ನಾಳೆಯೂ ಇದಕ್ಕಾಗಿ ಬನ್ನಿ....

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment