ಒಟ್ಟು ನೋಟಗಳು

Saturday, August 19, 2017

ಗುರುನಾಥ ಗಾನಾಮೃತ 
ಶುದ್ಧವಿರಲಿ ನಿನ್ನ ಅಂತಃಕರಣ
ರಚನೆ: ಅಂಬಾಸುತ 


ಶುದ್ಧವಿರಲಿ ನಿನ್ನ ಅಂತಃಕರಣ
ಅದುವೇ ನಿನಗಾಭರಣಾ
ತಪ್ಪದೂ ಎಂದಿಗೂ ಮರಣಾ
ಅದಕೆ ಹೆದರೆದೆ ನೀ ಮಾಡು ಗುರುಸ್ಮರಣಾ ||

ಮರೆಯದಿರು ಗುರುವೇ ನಾರಾಯಣಾ
ನಿನ ಮನವಾಗಿರಲಿ ಅವನಾ ತಾಣ
ಅವನಾ ಕರದೊಳಗಿಹುದೂ ನಿನ್ನಾ ಪ್ರಾಣ
ಬಿಡು ಬಿಡು ಸಂಸಾರದ ಪುರಾಣ ||

ಗುರುವಿಂದಲೆ ಜಗದಾ ಕಲ್ಯಾಣ
ಅವನಾ ಪದ ಹಿಡಿದರೇ ನೀನಾಗುವೆ ಜಾಣ
ನಿನ್ನೊಳಗಿರಲೀ ಭಾವ ಅರ್ಪಣ
ಏತಕೆ ಮಾಡುವೆ ಸುಮ್ಮನೆ ವಿಚಾರಣಾ ||

ಗುರುಹರಿ ಗುರುಹರ ಎನ್ನೋಣಾ
ಗುರುವೇ ತಾ ಬ್ರಹ್ಮಾ ನಂಬೋಣಾ
ಅಂಬಾಸುತ ಹಿಡಿ ನೀ ಗುರುಚರಣಾ
ಸದ್ಗುರುವಿನ ಮುಂದೇ ಸರ್ವವೂ ಗೌಣಾ ||

No comments:

Post a Comment