ಗುರುನಾಥ ಗಾನಾಮೃತ
ನಂಬಿರೆಮ್ಮ ರಾಯರಾ ನಿಜಸೌಖ್ಯದಾಯಕರಾ
ರಚನೆ: ಅಂಬಾಸುತ
ನಂಬಿರೆಮ್ಮ ರಾಯರಾ ನಿಜಸೌಖ್ಯದಾಯಕರಾ
ಆನಂದ ರೂಪರಾ ಅಗಣಿತಗುಣಮಹಿಮರಾ ||ಪ||
ಸತ್ಯ ಮಿಥ್ಯ ತೋರಿದವರಾ ನ್ಯಾಯ ನೀತಿ ಪೇಳಿದವರಾ
ಧರ್ಮ ಮಾರ್ಗದಲ್ಲೇ ನಡೆಯಬೇಕು ಎಂದು ಸಾರಿದವರಾ ||೧||
ಭಕುತರ ಭಯವೆಲ್ಲ ಕಳೆದು ನಿಜಭಾಗ್ಯವ ನೀಡಿದವರಾ
ಸಾಧನೆಯಾ ಹಾದಿಯಲ್ಲೇ ಸಾಗಿ ಸಾಗಿ ಎಂದವರಾ ||೨||
ಒಳಗಣ್ಣನು ತೆರೆಸುತಲೀ ಮುಕ್ಕಣ್ಣನ ತೋರಿದವರಾ
ಮಹನೀಯರ ಜೀವನವೇ ಪಾಠ ಅರಿಯಿರೆಂದವರಾ ||೩||
ಸಖರಾಯಪುರವಾಸರ ಸುಖ ನೀಡೋ ಮಹನೀಯರಾ
ವೇಂಕಟಾಚಲನೆಂಬೋ ನಾಮ ಧರಿಸಿ ಪೊರೆವವರಾ ||೪||
ಅಂಬಾಸುತನಂತರಂಗದಿ ಸದಾಕಾಲ ನೆಲೆಸಿರುವರ
ಆಗಮನಿಗಮಗಳಿಗೇ ನಿಲುಕದಿಹಾ ಅವಧೂತರಾ ||೫||
No comments:
Post a Comment