ಒಟ್ಟು ನೋಟಗಳು

Monday, August 7, 2017

ಗುರುನಾಥ ಗಾನಾಮೃತ 
ಸದ್ಗುರುನಾಥಾ ಸದ್ಗುರುನಾಥಾ ಸದ್ಗುರುನಾಥಾ ಎನ್ನಿರೀ
ರಚನೆ: ಅಂಬಾಸುತ 


ಸದ್ಗುರುನಾಥಾ ಸದ್ಗುರುನಾಥಾ ಸದ್ಗುರುನಾಥಾ ಎನ್ನಿರೀ
ಸಂತತ ಅವನಾ ಸ್ಮರಣೆಯಾ ಮಾಡೀ ನಿಜಸೌಖ್ಯವನ್ನೇ ಪಡೆಯಿರೀ ||ಪ||

ಸಲಹುವನವನೂ ಸಕಲವೂ ಅವನೂ ಸಾಧನೆಯೊಳಗೇ ಅಡಗಿಹನೂ
ಬಾಧೆಗಳನೂ ಕಳದೆ ಬಾಳೀನೊಳಗೇ ಬೆಳಕಾಗಿ ತಾ ಬಂದು ನಿಲ್ಲುವನೂ ||೧||

ಬೇಧಾಭಾವವ ತೋರದ ಭಗವಂತನಿವನೂ ಬ್ರಹ್ಮಾನಂದವಾ ನೀಡುವನೂ
ಬೋಧನೆಯಿಂದಲೇ ಧರ್ಮಮಾರ್ಗವ ಹಿಡಿಸಿ ಭಕುತರನೆಲ್ಲರಾ ಸಲಹುವನೂ ||೨||

ಬದುಕೆಂದರೆ ಏನೆಂಬುದ ಕಲಿಸುವವನಿವನೂ ಶಿಷ್ಯರ ಭಾಗ್ಯದ ನಿಧಿ ಇವನೂ
ಲೀಲೆಗಳ ತೋರುತ್ತಾ ಜಗಪಾಲನೆ ಮಾಡಿಹನೂ ಅಜ ಹರಿ ಹರರಾ ರೂಪನೂ ||೩||

ನಿರ್ಮಲ ಮನದೊಳು ವಿರಾಜಿಸಿಹನೂ ನಿಗಮಾಗಮಗಳಿಗೇ ನಿಲುಕಾನೂ
ನಾನೆಂಬುದ ಅಳಿಸೀ ನೀನೆಂಬುದ ಉಳಿಸೀ ಆತ್ಮೋದ್ಧಾರಗೈಯುವನೂ ||೪||

ಸಖರಾಯಪುರವಾಸಾ ಸದ್ಗುರು ಇವನೂ ವೇಂಕಟಾಚಲನೆಂಬ ನಾಮದವನೂ
ಅಂಬಾಸುತನಾ ಅನವರತ ಸಲಹುತಾ  ಆನಂದರೂಪದಿ ತಾನಿಹನೂ ||೫||

No comments:

Post a Comment