ಒಟ್ಟು ನೋಟಗಳು

Saturday, August 26, 2017

ಗುರುನಾಥ ಗಾನಾಮೃತ 
ಒಯ್ಯೋ ಗುರುವೇ ಒಯ್ಯೋ
ರಚನೆ: ಶೈಲಜಾ ಕುಮಾರ್ 


ಒಯ್ಯೋ ಗುರುವೇ ಒಯ್ಯೋ
ಕರೆದೊಯ್ಯೋ ಸದ್ಗುರುವೇ ಕರೆದೊಯ್ಯೊ ।। ಪ ।। 

ಸ್ವಾರ್ಥದ್ವೇಷವಿರದೆಡೆ
ಮಾನಾಪಮಾನವಿರದೆಡೆ
ಸ್ತುತಿನಿಂದನೆಯಿರದೆಡೆ
ಮದಾಹಂಕಾರವಿರೆಡೆ ।। ೧ ।।

ನನ್ನದೆಂಬ ಭ್ರಮೆಯಿರದೆಡೆ
ಮೋಹಬಂಧನವಿಲ್ಲದೆಡೆಗೆ
ಮಾಯಪಾಶವಿಲ್ಲದೆಡೆಗೆ
ದಾಸ್ಯದ ಶೃಂಕಲೆ ಇಲ್ಲದೆಡೆಗೆ ।। ೨ ।।

ಆನಂದವೇ ತುಂಬಿರುವೆಡೆಗೆ
ಸರ್ವಸಮತ್ವದ ಭಾವದೆಡೆಗೆ
ಜ್ಞಾನದ ಅರಿವು ಮೂಡುವೆಡೆಗೆ
ಮುಕ್ತಿಯ ದಾರಿ ತೋರುವೆಡೆಗೆ ।। ೩ ।।


ಆತ್ಮಾನುಸಂಧಾನವಾಗುವೆಡೆ
ನಾನೇ ನೀನೆಂಬ ಅಭೇದತೋರುವೆಡೆಗೆ
ತಾದಾತ್ಮ್ಯ ಭಾವಬರುವೆಡೆಗೆ
ಕರ್ಮಸವೆಯೋ ದಾರಿಯೆಡೆಗೆ ।। ೪ ।।

No comments:

Post a Comment