ಒಟ್ಟು ನೋಟಗಳು

238896

Wednesday, August 30, 2017

ಗುರುನಾಥ ಗಾನಾಮೃತ 
ನೀ ಕಾಯಬೇಕೋ ಗುರುದೇವಾ
ರಚನೆ: ಅಂಬಾಸುತ 


ನೀ ಕಾಯಬೇಕೋ ಗುರುದೇವಾ
ನಿನ್ನನ್ನೇ ನಂಬಿಹೆವೋ ಗುರುದೇವಾ
ಬಿಡಿಸಯ್ಯ ಭವಬಂಧನಾ ಗುರುದೇವಾ
ಕರುಣಿಸಯ್ಯ ಮನಶಾಂತಿಯ ಗುರುದೇವಾ ||

ನೀನೇನೇ  ಎಮಗೇ ಮಹದೇವಾ
ನಿನ್ನಿಂದಲೇ ಇಹುದೋ ಈ ಜೀವಾ
ತೊಲಗಿಸೋ ಎನ್ನೊಳಗಿನ ಅಹಂಭಾವಾ
ಸದಾ ಜಪಿಸುವೇ ಶಿವಾ ಶಿವಾ ||

ಪರಿಹರಿಸುವನೊಬ್ಬನೇ ಈ ನೋವಾ
ಅವನೇ ನಮ್ಮಾ ಗುರುದೇವಾ
ನೀನಿಲ್ಲದೆ ಈ ದೇಹ ನಿಜವೋ ಶವಾ
ಅದನರಿಯಲು ಬೇಕು ಭವದಾ ಅನುಭವಾ ||

No comments:

Post a Comment