ಗುರುನಾಥ ಗಾನಾಮೃತ
ಬೃಂದಾವನ ನೋಡಿರೋ ಗುರುನಾಥನ
ರಚನೆ: ಆನಂದರಾಮ್, ಶೃಂಗೇರಿ
ಬೃಂದಾವನ ನೋಡಿರೋ ಗುರುನಾಥನ
ಸಖರಾಯಪುರದ ಗುರು ಮಹನೀಯನ |
ಅಯ್ಯನ ಕೆರೆಯ ಸನಿಹದ ದಾರಿಯಲಿ
ಅಡಿಕೆ ತಂಪಿನ ಗಾಳಿಯ ನೆಲೆಯಲ್ಲಿ
ಹರಸುತ ಬಕುತ ಬಂಧುಗಳ ದಿನವಿಲ್ಲಿ
ನೆಲೆ ನಿಂತಿಹನು ನಮ್ಮ ಗುರುನಾಥನಿಲ್ಲಿ
ಕೃಷ್ಣ ಯೋಗೀ0ದ್ರರ ಪರಮ ಬಕುತನು
ಚಂದ್ರಶೇಖರ ಯತಿಗಳ ಸೇವಕನಿವನು
ಬಕುತರ ಒಳಿತಿಗೆ ವೇದಿಕೆ ಕರುಣಿಸಿಹನು
ಗುರು ಇವನು ನಮ್ಮ ಸದ್ಗುರುನಾತನು
ಗದರಿದ ಬಕುತನ ಕರ್ಮವು ಕಳೆವನಿವನು
ದರುಶನ ಮಾತ್ರದಿ ಪಾಪಿ ಬದಲಾಗುವನು
ಬಡವ ಬಲ್ಲಿದ ಜ್ಞಾನಿ ಅಜ್ಞಾನಿ ಎಲ್ಲಾ ಒಂದು
ಪುನೀತರಾಗಿ ಬೃಂದಾವನಕೆ ನಿರಂತರ ಬಂದು
ಬೃಂದಾವನ ದರುಶನ ಪಡೆದ ಧನ್ಯನುನಾನು
ಶಾಂತಿಯು ನೆಲಸಲು ಮನದಲಿ ಎಂದೂ
ನಿಸ್ವಾರ್ಥ ಬಕುತಿಯ ಮೂಡಲಿ ಎಂದು
ಬೇಡುತ ಬರುವೆನು ಬೃಂದಾವನಕೆ ಎಂದೆಂದೂ
No comments:
Post a Comment