ಗುರುನಾಥ ಗಾನಾಮೃತ
ಪಾದವಾ ಪಿಡಿಯಿರೋ ಸದ್ಗುರು ಪಾದವ
ರಚನೆ: ಆನಂದರಾಮ್, ಶೃಂಗೇರಿ
ಪಾದವಾ ಪಿಡಿಯಿರೋ ಸದ್ಗುರು ಪಾದವ
ಪಾಪ ಕಳೆದು ಸದ್ಗತಿಯಾ ನೀಡುವ ಪಾದವ
ಸಖರಾಯಪುರದ ಮಹನೀಯನ ಪಾದವ
ಬಕುತ ವೃಂದವ ಸಲಹುವವನ ಪಾದವ
ಕಾಲಾತೀತನ ದೇಹಾತೀತನ ಪಾದವಾ
ಭಕ್ತ ಜನ ಪರಿಪಾಲಕನ ಪಾದವ
ಆನಂದಘನನ ಆನಂದ ಸ್ವರೂಪನ ಪಾದವ
ಮಂಗಳ ರೂಪನ ದಿವ್ಯ ತೇಜನ ಪಾದವ
ಬಯಸದೆ ಬಂದು ಹರಸುವ ಗುರು ಪಾದವ
ನಿಜ ಬಕುತನ ಸದಾ ಪೊರೆವನ ಪಾದವ
ವಿಧಿಯ ಬದಲಿಸಿ ಹರಸುವವನ ಪಾದವ
ಕುಕರ್ಮ ಕಳೆದು ಹರಸುವವನ ಪಾದವ
ಎಚ್ಚರಿಸಿ ಬವಬಂದನವ ಕಳೆವನ ಪಾದವ
ನುಡಿಯಲ್ಲೇ ಸರಿದಾರಿ ತೋರುವನ ಪಾದವ
ಪರಮ ಪುರುಷ ಪರಮಾತ್ಮನ ಪಾದವ
ಜಗದೊಡೆಯ ಉದ್ದಾರಕನ ಪಾದವ
No comments:
Post a Comment