ಗುರುನಾಥ ಗಾನಾಮೃತ
ದಯ ಬಾರದೇ ಗುರುವೇ ಇನ್ನೂ ನನ್ನ ಮೇಲೆ
ರಚನೆ: ಆನಂದರಾಮ್, ಶೃಂಗೇರಿ
ದಯ ಬಾರದೇ ಗುರುವೇ ಇನ್ನೂ ನನ್ನ ಮೇಲೆ
ಸಹನೀಯ ಮಾಡೆನ್ನ ಈ ಬದುಕ ಓ ಗುರುವೇ
ಎನ್ನ ಕರ್ಮಕೆ ನಾನಲ್ಲವೇ ಹೊಣೆ ಗುರುವೇ
ನಿನ್ನ ಪಾದವ ಪಿಡಿದೊಡೆ ಬಿಡುಗಡೆಯಿಲ್ಲವೇ
ಬೇಡಿದೊಡೆ ದರುಶನ ನೀಡುವೆ ಸಕಲಿರಿಗೆ
ಇನ್ನೇಕೆ ತಡಮಾಡುವೆ ದಯೆ ತೋರು ಗುರುವೇ
ಹಂಬಲಿಸಿ ಹಾತೊರೆದು ನಾ ಕೂಗಿ ಬೇಡುವೆ
ದಯಮಾಡಿ ಒಮ್ಮೆ ನಿನ್ನರಿವ ನೀಡು ಎನಗೆ
ಏನೂ ಅರಿಯದವ ನಾನೆಂದು ಉದಾಸೀನವೆ
ಭಕುತಿ ತೋರುವ ಪರಿ ಎನಗೆ ತಿಳಿದಿಲ್ಲವೇ
ನಿಜ ಬಕುತರ ಒಡನಾಟ ನನಗಿಲ್ಲವೇ ಗುರುವೆ
ಎನ್ನ ಮನದಾಳ ತಿಳಿಯಿಲ್ಲವೇ ಓ ಗುರುವೇ
ನಿಟ್ಟುಸಿರು ಬಿಡುತ ನಿತ್ಯ ನಿನ್ನ ಹಂಬಲಿಸುತ
ದೀನನಾಗಿ ಬೇಡುವೆ ದಯೆ ತೋರು ಗುರುವೇ
No comments:
Post a Comment