ಗುರುನಾಥ ಗಾನಾಮೃತ 
ನಾಥನೇ ಗುರುನಾಥನೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 
ನಾಥನೇ ಗುರುನಾಥನೇ  
 ನೊಂದಿಹ ಭಕುತರಿಗೆ ಬೆಳಕ ತೋರಯ್ಯಾ |
ದೇವನೆ ಮಹದೇವನೇ 
ಸಾಧಕರಿಗೆ ಅದ್ವೈತ ಸುಧೆಯ ಉಣಿಸಯ್ಯಾ ||
 ಬಂಧುವೇ ಆತ್ಮಬಂಧುವೇ
ನಿಸ್ವಾರ್ಥದಿ ನೆಡೆವರಿಗೆ ರಕ್ಷಕನಾಗಯ್ಯಾ |
ಸಾಗರನೇ ದಯಾಸಾಗರನೇ
ನನ್ನಂತರಂಗವನು  ಶುದ್ಧಿಯನೆ ಮಾಡಯ್ಯಾ ||
ಈಶನೇ ಸರ್ವೇಶನೇ
ನಿಜಗೃಹದ ದಾರಿಯ ತೋರಯ್ಯಾ |
ವಂದ್ಯನೇ ಅಭಿವಂದ್ಯನೇ 
ಸೇವೆಯ ಭಾಗ್ಯವ ಕರುಣಿಸಯ್ಯಾ ||

No comments:
Post a Comment