ಗುರುನಾಥ ಗಾನಾಮೃತ
ಹೊಕ್ಕೋ ಗುರುಮನೆಯಾ
ರಚನೆ: ಅಂಬಾಸುತ
ಹೊಕ್ಕೋ ಗುರುಮನೆಯಾ
ಲೆಕ್ಕವಿಲ್ಲದ ಪುಣ್ಯದಾ ಪಾಲು ನಿನಗಿದೆ ಅಲ್ಲಿ
ದಿಟ್ಟ ಸದ್ಗುರುವರನಾ ಲೀಲಾಕ್ಷೇತ್ರದಲ್ಲಿ ||ಪ||
ಯಾರು ಅಧಿಕರಲ್ಲ ಯಾರು ಅಲ್ಲಿ ತೃಣರಲ್ಲ
ಬೇಧಭಾವವಿರದ ನಿಜ ಭಕ್ತಿಭಾವದ ಅರಮನೆಯದು ||೧||
ಯಾರು ಕುಳಿತವರಿಲ್ಲ ಅಲ್ಲಿ ಯಾರು ದಣಿದವರಿಲ್ಲ
ಸಮರ್ಪಣಾ ಭಾವದಲ್ಲಿ ಸೇವೆ ಸಲ್ಲಿಸುತಿಹರಲ್ಲಿ ||೨||
ಗುರುವಿನದೆ ದರ್ಬಾರು ಇನ್ಯಾರದಿಲ್ಲ ಕಾರುಬಾರು
ಸತ್ಯ ಶೋಧನೆ ಸತ್ಯ ಚಿಂತನೆ ಸದ್ವಿಚಾರವ ಸಾರು ಸಾರು ||೩||
ಆತ್ಮಕೂ ದೇಹಕೂ ಭೂರಿ ಭೋಜನ ಅಲ್ಲುಂಟೂ
ಮರೆಯದಿರು ಗುರುಶಿಷ್ಯನ ನಂಟು ಸಾವಿರ ಜನುಮದಾ ಗಂಟು ||೪||
ಸ್ವರ್ಗಕೆ ಸುಮಾರ್ಗವಿದುವೆ ಸದ್ಗುರುವಿನಾ ನಿವಾಸ
ಸಾರಲಾರೆ ಸಾರಲಾರೆ ಸದ್ಗುರುವಿನ ಸದ್ವಿಲಾಸ ||೫||
ಸಖರಾಯಪುರಾಧೀಶನ ಸಾಮೀಪ್ಯವಿಹುದಿಲ್ಲೇ
ಅಂಬಾಸುತನ ಸತ್ಪದಕೇ ಮೂಲವಿದುವೇ ||೬||
No comments:
Post a Comment