ಗುರುನಾಥ ಗಾನಾಮೃತ
ಮುದ್ದುಪಾದವ ನೋಡುವ ಬಾರೆ
ರಚನೆ: ಅಂಬಾಸುತ
ಮುದ್ದುಪಾದವ ನೋಡುವ ಬಾರೆ
ಸದ್ಗುರುನಾಥನ ದಿವ್ಯಪಾದವ ಕಾಣುವ ಬಾರೆ ||ಪ||
ಬೇಡದೇ ವರಗಳನೆ ನೀಡುವ ಭಾಗ್ಯದ ಗಣಿಯಂತಿರುವಾ
ಪರಮಪುರುಷ ಪರಂಧಾಮ ಪರಮೇಶ್ವರ ಅವಧೂತನಾ ||ಅ.ಪ||
ಸ್ವರ್ಗಸುಖ ಅಲ್ಲಿಹುದು ಕಾಣಮ್ಮ
ಸದ್ಗುರುನಾಥನ ಪಾದದೊಳಗೆ ಪಾಪವೆಲ್ಲಾ ಭಸ್ಮ ನೋಡಮ್ಮ
ಸರ್ವತೀರ್ಥಗಳಿಹವು ಅಲ್ಲಿ ಎಂದು ನುಡಿದಿವೆ ವೇದಶಾಸ್ತ್ರಗಳು
ಸರ್ವವಿಹಿತ ಧರ್ಮಗಳನು ಬೋಧಿಸುವ ನಮ್ಮ ಗುರುನಾಥನಾ ||೧||
ಆನಂದ ನಿಲಯ ಕಾಣಮ್ಮ
ಸದ್ಗುರುನಾಥನ ಪಾದದೊಳೆ ನಿಜಾನಂದವಿಹುದಮ್ಮ
ಅಹಂಭಾವವ ಅಳಿಸಿ ಸೋಹಂಭಾವವ ನೀಡುತಾ ಪೊರೆದು
ಸತ್ಸಂಗ ಸಾಮೀಪ್ಯ ಸಾಯುಜ್ಯ ನೀಡೋ ಗುರುವಿನ ||೨||
ಸಖರಾಯಪುರದೊಳಮ್ಮಾ
ಸದ್ಗುರುನಾಥ ನೆಲೆಸಿಹ ನೋಡಮ್ಮಾ
ಅಂಬಾಸುತನಾ ಪದಕೆ ಪ್ರೇರಣೆ ಈ ಗುರುಪಾದ
ಆತ್ಮದೊಳು ಅಡಿಯಿಟ್ಟು ಅಚಿಂತ್ಯನನ್ನಾಗಿಸೊ ಗುರುವಿನ ||೩||
No comments:
Post a Comment