ಒಟ್ಟು ನೋಟಗಳು

Saturday, April 21, 2018

ಗುರುನಾಥ ಗಾನಾಮೃತ 
ಗುರುವಿನ ನುಡಿಗಳ ಕೇಳುವ ಬಾರೇ ಸಖಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಗುರುವಿನ ನುಡಿಗಳ ಕೇಳುವ ಬಾರೇ ಸಖಿ
ಅವನ ವಚನಾಮೃತವ ಕೇಳೋಣ ಬಾರೇ ಸಖಿ ||

ದುರ್ಗುಣಗಳ  ಓಡಿಸುವ ನುಡಿ
ದುರ್ಮನಗಳ ಬಿಡಿಸುವ ನುಡಿ |
ದುಷ್ಟತನವ ದೂರಿಡುವ  ನುಡಿ
ದುಶ್ಚಿಂತೆಯ ‌ಕರಗಿಸೋ ನುಡಿ || ೧ ||

ಸಕಲವೇದಗಳಸಾರವಿವನ ನುಡಿ
ಸಾಧುಸಂಗವ ಮಾಡಿಸುವ ನುಡಿ |
ಪದಸೇವೆಯಲಿ ನಾನಿಹೆಯೆನುವ ನುಡಿ 
ನಮ್ಮೊಳಗಿನ ಗುರುವನು ತೋರುವ ನುಡಿ  || ೨ ||

ಸುಲಭಕೆ ಅರ್ಥವಾಗದಿವನ ನುಡಿ‌
ತಿಳಿದರೆ ಬದಲಾಗುವುದವನ  ನೆಡೆನುಡಿ |
ಅದರಂತೆ ನೆಡೆದರೆ ನಾವು  ಜೀವನವಿಡಿ
ಸಿಗುವುದು ಸಾಯುಜ್ಯ ಅವನ ಪಾದದಡಿ || ೩ ||

No comments:

Post a Comment