ಒಟ್ಟು ನೋಟಗಳು

Friday, April 27, 2018

ಗುರುನಾಥ ಗಾನಾಮೃತ 
ಉದ್ಧರಿಸು ಎನ್ನ ದಯೆ ತೋರಿ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಉದ್ಧರಿಸು ಎನ್ನ ದಯೆ ತೋರಿ ಗುರುವೇ
ದಾರಿ ಕಾಣದೆ  ಬಂದಿರುವೆ  ನಿನ್ನ ಸನಿಹವೇ
                                                        
ಲೋಕ ತೋರಿದ ದಾರಿಯಲ್ಲಿ ನೀ ಕಾಣಲಿಲ್ಲ ನೀ ಕಾಣದೆ ಮನ  ಕೂಗಿದೆ ನೀ ಸಿಗಲಿಲ್ಲವಲ್ಲ

ಬರಿದಾದ  ಮನದಲ್ಲಿ ನಿನ್ನ ನಾಮ ತುಂಬಿದೆ
ನಾಲಿಗೆಯು ನಿನ್ನ ನಾಮವ  ಸ್ತುತಿಸುತ್ತಿದೆ   
                                                        
ಕಣ್ಮುಚ್ಚಿ ಕೈ ಮುಗಿದು ಬೇಡುವೆನು ನಿನ್ನನು
ಕೈ ಪಿಡಿದು ಮುಂದೆ ನಡೆಸೆನ್ನನು ಗುರುವೇ

ನಾ ಮಾಡಿದ ಕರ್ಮವದು ದಾರಿಯಲಿ ನಿಂದು
ಬೆಂಬಿಡದೆ ಹಿಂಬಾಲಿಸುತ ಕಾಡುತಿದೆ ಇಂದು

ಪರೀಕ್ಷಿಸ ಬೇಡ ಗುರುವೇ ಸೋತಿಹೆನು ನಾನು
ನಿನ್ನೆದುರು ಶಿರ ಬಾಗಿ ಬೇಡುವೆ ಮನ್ನಿಸೆನ್ನನು

ಭಕುತಿ ಎಂಬುದು ನಾನರಿಯದ ರೀತಿಯೇ
ನಾ ತೋರುತಿಹುದು ಬರೀ ಬೂಟಾಟಿಕೆಯೇ

ವೇದ ಮಂತ್ರಗಳ ಶಾಸ್ತ್ರ ನಿಯಮದರಿವಿಲ್ಲ
ಮನದ  ಬಾವನೆ ಹೊರತು ಬೇರೆ ಗೊತ್ತಿಲ್ಲ

No comments:

Post a Comment