ಗುರುನಾಥ ಗಾನಾಮೃತ
ನಗುತಲಿ ಕುಳಿತಿಹರು ಗುರುನಾಥ ಮರದ ನೆರಳಲ್ಲಿ
ರಚನೆ: ಆನಂದರಾಮ್, ಶೃಂಗೇರಿ
ನಗುತಲಿ ಕುಳಿತಿಹರು ಗುರುನಾಥ ಮರದ ನೆರಳಲ್ಲಿ
ಬರುವ ಭಾವುಕ ಭಕುತರ ಬವಣೆ ತೀರಿಸುತಲಿ|
ಆ ನಗೆಯ ಹಿಂದಿದೆ ನಾ ಅರಿಯದ ಏನೋ ಮರ್ಮ
ಎನಗೆ ತಿಳಿದಿದೆ ಅನ್ನುತ ನಾ ಮಾಡಿದ ಆ ಕರ್ಮ|
ದೂರ ನೋಡುತ ಎಲ್ಲರ ಅರಿವಿನೊಳು ಇರುವಾತ
ಸುಮ್ಮನೆ ತಿಳಿಯದವನಂತೆ ಮೌನದಿ ಕುಳಿತನೀತ|
ಮೂಕ ಪ್ರಾಣಿಯ ಸನಿಹ ಬಯಸುವ ಗುರುನಾಥ
ಶುದ್ದ ಮನದ ಬಕುತಿಯ ತೋರೆಂದರು ಅವಧೂತ|
ಅವರ ಅಣತಿ ಇಲ್ಲದೆ ಯಾರೂ ಇಲ್ಲಿ ಸಲ್ಲುವರಿಲ್ಲ
ನಿನ್ನ ಅರಿವಿಲ್ಲದೆ ಮುಗುದ ಭಕುತಿಗೆ ಒಲಿವನೀತ|
ನಂಬಿ ನಡೆದರೆ ಗುರುವ ಬಯವಿಲ್ಲಾ ಎಂದನೀತ
ನಂಬದಲೇ ಭ್ರಮೆಯಲಿ ಬದುಕದಿರು ಎಂದನೀತ|
ಹಂಗಿನ ಬಕುತಿ ತೋರಿಕೆಯ ಭಕುತಿ ಬೇಡ ಎಂದರು
ನಿನ್ನ ಅರಿವಿನಾಲಯಕೆ ದಾರಿ ತೋರುವೆ ಎಂದರು|
No comments:
Post a Comment