ಗುರುನಾಥ ಗಾನಾಮೃತ
ಗುರುವುಗುರುನಾಥ ಬಂದು ಮನ ಬೆಳಗಿತಯ್ಯ
ರಚನೆ: ಆನಂದರಾಮ್, ಶೃಂಗೇರಿ
ಗುರುನಾಥ ಬಂದು.ಮನ ಬೆಳಗಿತಯ್ಯ
ಬವ ಬಂದ ಕಳೆದು ಪುನೀತವಾಯಿತಯ್ಯ
ಸದ್ಗುರುಪಾದದೂಳಿಯಿಂದಪಾವನವಾಯಿತು
ಪಾಪ ಕಳೆಯಿತು ಸದ್ಗತಿ ದೊರೆಯಿತು
ಇನ್ನು ಮನದ ದುಗುಡ ಮರೆಯಾಯಿತು
ಗುರುವಿನ ಕಾರುಣ್ಯ ದೊರೆತು ಹಸನಾಯಿತು
ಮನದ ಮನೆಯ ಒಳಗೆ ಹೊರಗೆ ಶುದ್ದವಿರಲಿ
ಗುರುವಿನ ಹೊರತು ಬೇರೇನೂ ಸುಳಿಯದಲಿ
ಶುದ್ಧ ಬಾವಧಿ ಬಜಿಸು ನಿನ್ನ ಗುರುನಾಥನ
ಚಿತ್ತ ಶುದ್ದಿ ಮಾಡುವವನ ಅನುಕ್ಷಣ
ಗುರುವಿನ ಮನೆ ಬಕುತನ ದೇವಾಲಯವು
ಇರಲಿ ನಿನ್ನ ಮನಶುದ್ದಿ ಒಳ ಅಡಿ ಇಡಲು
ಹುಂಬತನವ ಮರೆತು ದೈನ್ಯಧಿ ನೀ ಬೇಡು
ಕರುಣಿಸುವನು ನೀ ಕೇಳದ ವರವನ್ನು
ನೀನು ನೀನಲ್ಲ ಸದ್ಗುರುನಾಥನ ಮುಂದೆ
ಉದ್ಧರಿಸುವನು ಎಲ್ಲರನು ಲೋಕದ ತಂದೆ
ಬರೀ ಭ್ರಮೆಯ ಮನೆಯಲ್ಲಿ ನಾವಿರಲು
ಸದ್ಗುರುವು ಸದಾ ದಾರಿ ತೋರುವನಿಲ್ಲಿ
No comments:
Post a Comment