ಒಟ್ಟು ನೋಟಗಳು

Monday, April 23, 2018

ಗುರುನಾಥ ಗಾನಾಮೃತ 
ಬಂದಾ ನೋಡೇ ಸದ್ಗುರು
ರಚನೆ: ಅಂಬಾಸುತ 


ಬಂದಾ ನೋಡೇ ಸದ್ಗುರು
ಭಕ್ತೋದ್ಧಾರಕೆ ಬಂದ ನೋಡೇ ಸದ್ಗುರು ||ಪ||
ತತ್ವಪೂರ್ಣನಾಗಿ ಬೋಧರೂಪನಾಗಿ
ಭವದಾ ಬಾಧೆಯ ಹರಿಸಿ ನಿಜಭಾಗ್ಯ ನೀಡಲು ||ಅ.ಪ||

ಕರುಣಿಸುತಾ ಜ್ಞಾನವ ಬಿಡಿಸಿ ಮಾನಾಪಮಾನವ
ಸೋಹಂ ಭಾವವ ತುಂಬಿ ಅಹಂಭಾವವ ಅಳಿಸಲೂ ||೧||

ಕಾಮಾದಿಗಳ ಜೈಸಲು ಧರ್ಮ ಮಾರ್ಗವ ತೋರಿಸಿ
ದಾನಾದಿ ಕರ್ಮಗಳ ನಿರುತವೂ ಮಾಡಿರೆನಲೂ ||೨||

ನಿಜ ಪರಮಹಂಸಾಶ್ರಮಿಯೇ ಪರಮೇಶ್ವರ ಎನುತಾ
ಪಾದಸೇವೆಯ ಮಾಡಿ ಪರಮಪದ ಪಡೆಯಿರೆನಲೂ ||೩||

ದಟ್ಟಿಯೊಂದನು ಸುತ್ತಿಕೊಂಡು ತಾ ದಿಟ್ಟನಾಗಿ
ನಾರಸಿಂಹ ತಾನೇ ನರವೇಷ ಧರಿಸಿದಂತೇ ||೪||

ಅಂಬಾಸುತನಾ ಅಂತರಂಗದ ಅನವರತಾ
ನಲಿಯುತಲಿಹ ನಮ್ಮ ಸಖರಾಯಪುರಾಧೀಶ ||೫||

No comments:

Post a Comment