ಒಟ್ಟು ನೋಟಗಳು

Saturday, April 14, 2018

ಗುರುನಾಥ ಗಾನಾಮೃತ 
ಸ್ತುತಿಸಲರಿಯೆನೊ ನಿನ್ನ ಗುರುವೆ
ರಚನೆ: ಅಂಬಾಸುತ 


ಸ್ತುತಿಸಲರಿಯೆನೊ ನಿನ್ನ ಗುರುವೆ
ಪಠಿಸಲರಿಯೆನೊ ನಿಮ್ಮ ಮಹಿಮೆ
ಕಪಟವಿಲ್ಲದೆ ನಿಮ್ಮ ಪೂಜಿಪ
ಮತಿಯ ಪಾಲಿಸಯ್ಯ ಗುರುವೆ ||ಪ||

ಸತಿಯು ಬೇಡಲು ಸೌಭಾಗ್ಯವಿತ್ತೆ
ಮತಿಹೀನಗೆ ಜ್ಞಾನವನಿತ್ತೆ
ಮೋಡಕೂಡಿಸಿ ಮಳೆಯ ಸುರಿಸಿ
ಜಲಕ್ಷಾಮವ ನೀಗಿಸಿದೆ ||೧||

ದೀನನನು ದೊರೆ ಎನಿಸಿದೆ
ದಾರುಣತೆಗೆ ನೀನು ಕರಗಿದೆ
ದಾರಿ ತಪ್ಪಿದ ಸುತರನೆಲ್ಲಾ
ಸರಿದಾರಿಗೆ ಕೊಂಡೊಯ್ದೇ ||೨||

ಪ್ರಾಣಕಂಟಕವಿರಲಿ ಪಾರು
ಮಾಡಿದಂಥ ಸಂಜೀವಿನಿ ನೀನು
ಸತಿಗೆ ಪತಿಯೆ ಪರದೈವಾ
ಎಂಬುದಾ ಅರುಹಿದೆ ಗುರುವೇ ||೩||

ಮುಷ್ಟಿಯಲಿ ಭಂಡಾರ ಹಿಡಿದೆ
ತೆಕ್ಕೆಯಲಿ ನಿಧಿಯನ್ನೆ ಇರಿಸಿಹೆ
ಅಕ್ಷಯದ ಅನ್ನಪೂರ್ಣೆಯನು
ಸದಾ ನೀ ಸ್ಮರಿಸಿದೆ ||೪||

ನಿನ್ನ ಲೀಲೆ ಕಾಣದವರ್ಯಾರೊ
ನಿನ್ನನು ಅರಿತವರು ಯಾರೊ
ಪ್ರತ್ಯಕ್ಷ ಪರಮೇಶ್ವರ 
ನೀನೇ ನೀನೇ ನೀನೇ ಪ್ರಭುವೆ ||೫||

ಸಖರಾಯಪುರಾಧೀಶನೇ
ಹೇ ಅವಧೂತನೇ
ಅಂಬಾಸುತನಾ ಪಿತನೇ
ಅರಿವಿನರಮನೆಯ ದೊರೆಯೇ ||೬||

No comments:

Post a Comment