ಒಟ್ಟು ನೋಟಗಳು

Sunday, April 22, 2018

ಗುರುನಾಥ ಗಾನಾಮೃತ 
ಶ್ರೀವೇಂಕಟಾಚಲ ಸದ್ಗುರುವರನೆ ಸಲಹೌ ಭಕುತರ ಅನವರತಾ
ರಚನೆ: ಅಂಬಾಸುತ 


ಶ್ರೀವೇಂಕಟಾಚಲ ಸದ್ಗುರುವರನೆ ಸಲಹೌ ಭಕುತರ ಅನವರತಾ
ಗತಿ ನೀನೆಂದೂ ಬಂದಿಹೆವಯ್ಯ ಸನ್ಮತಿ ಪಾಲಿಸಿ ನೀ ಹರಸೌ ||ಪ||

ಸ್ತುತಿಸಲರಿಯೆನೋ ನಿನ್ನ ಮಹಿಮೆಗಳ ಸ್ಥಿತಿಕಾರಣ ಗುರುದೇವಾ
ಅತಿ ದೂರ್ತರು ನಾವಾಗಿಹೆವೋ ನಿನ್ನಡಿಯನೆ ನಂಬಿ ಬೇಡಿಹೆವೊ  ||೧||

ಸತ್ಯ ಮಿಥ್ಯದಾ ಬೇಧವ ತೋರುತ ಸನ್ಮಾರ್ಗವ ನೀ ಬೋಧಿಸಿಹೆ
ಪ್ರಿಯಮಾತುಗಳಲೇ ಬ್ರಹ್ಮಮಾರ್ಗ ತೋರಿ ಸದ್ಗುರುವೆಂದೆನಿಸಿಹೆ ||೨||

ಮಾತಾಪಿತ ನೀ ಬಂಧು ಬಳಗ ನೀ ಧನಕನಕ ಸರ್ವಸ್ವ ನೀ
ಎನಗೆ ನೀ ದೊರೆಯಯ್ಯ ಅರಿವಿನ ಅರಮನೆಗೆ ಕರೆದೊಯ್ಯಯ್ಯ ||೩||

ಪದಕೆ ನಿಲುಕದವ ನೀನಾಗಿರುವೆ ಪರಬ್ರಹ್ಮ ಸ್ವರೂಪನೇ
ಪರಮೇಶ್ವರ ನೀ ಪರಂಧಾಮ ನೀ ಪರಿಪಾಲಿಸೊ ಲಲಿತೇ ನೀ ||೪||

ಧರೆಯೊಳಗುತ್ತಮ ಸಖರಾಯಪುರದೊಳು ನೆಲೆಸಿದ ಮಹಿಮೋತ್ತಮನೆ
ಅಂಬಾಸುತನಾ ಅನವರತ ಪೊರೆದಿಹಾ ಸದ್ಗುರುನಾಥನೇ ||೫||

No comments:

Post a Comment