ಗುರುನಾಥ ಗಾನಾಮೃತ
ನೀನಲ್ಲದೆ ಮತ್ತಾರು ಗುರು ಇಹರೋ
ಸದ್ಗುರುನಾಥ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ನೀನಲ್ಲದೆ ಮತ್ತಾರು ಗುರು ಇಹರೋ ಸದ್ಗುರುನಾಥ
ನಿನ್ನನಲ್ಲದೆ ಮತ್ತಾವ ದೈವ ಕಾಣೆನೋ ||
ನಿನ್ನ ಮಮತೆಯ ಮಡಿಲೇ
ನನಗೆ ಪ್ರೇಮದ ಕಡಲು |
ನಿನ್ನ ಪ್ರೀತಿಯ ನಗುವೇ
ನನಗೆ ಹರ್ಷದ ಹೊನಲು
ನನ್ನ ಹೃದಯದಿ ನೀನೇ ತುಂಬಿದಿಯಯ್ಯಾ
ಕರುಣಾಳು ನನ್ನ ನೀ ಸಲಹಯ್ಯಾ || ೧ ||
ನಿನ್ನ ವಾತ್ಸಲ್ಯದ ಕೈತುತ್ತೇ
ಕಳೆವುದೆಲ್ಲಾ ಆಪತ್ತು |
ನಿನ್ನ ನೆನೆವ ಹೊತ್ತೇ
ನನಗೆ ಪರಮ ಸಂಪತ್ತು
ನಿನ್ನ ನಾಮದಿ ನನ್ನ ಜೀವವಿದಯ್ಯಾ ಗುರುವೇ
ಭವದಿ ನೊಂದ ನನ್ನ
ನೀ ಉದ್ಧರಿಸಯ್ಯಾ || ೨ ||
ನಿನ್ನ ಮಧುರ ನುಡಿಯು
ಅಮೃತದ ಸುಧೆಯು |
ನಿನ್ನ ಸೇರುವ ದಾರಿ ಸರಳ
ಆ ದಾರಿಲಿ ಸಾಗುವರು ವಿರಳ || ೩ ||
ಕೈಯ ಹಿಡಿದು ನೆಡೆಸಯ್ಯಾ ಗುರುವೇ
ಅರಿವಿನ ಮನೆಯ ತೋರಿಸಯ್ಯಾ ||
No comments:
Post a Comment