ಗುರುನಾಥ ಗಾನಾಮೃತ
ವರವೊಂದ ನೀಡಯ್ಯಾ ಗುರುದೇವ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ವರವೊಂದ ನೀಡಯ್ಯಾ ಗುರುದೇವ
ಅಂಜಲಿಪಿಡಿದು ಬೇಡುತಿಹೆ ನಾನು
ವರವೊಂದ ನೀಡಯ್ಯಾ ಗುರುವೇ ||
ಮನದ ಬಿಂಬದಲಿ ನೀನಿಹೆ ದೇವ
ನೀನಿಲ್ಲದೆ ಗತಿಯಾರೆನಗೆ ಗುರುದೇವ !|
ಮನೋವಾಕ್ಕಾಯಗಳಲಿ ತುಂಬಿರಲಿ ನಿನ್ನ ಮೂರುತಿ
ಶಾಂತಮಂದಿರದಿ ನೆನೆಯಲಿ ನಿನ್ನ ಕೀರುತಿ || ೧ ||
ಕಂಗಳಲಿ ತುಂಬಿಹುದು ಆರ್ತತೆಯ ಕಣ್ಣೀರು
ಮನದಲಿ ಹರಿದಿಹುದು ಭಕ್ತಿರಸದಾ ಪನ್ನೀರು |
ನಿನ್ನ ಸೇವೆಧ್ಯಾನವೆಮ್ಮಯ ಉಸಿರಾಗಲೀ
ನಿನ್ನ ಮಾತೇ ಅನುಶಾಸನವಾಗಲೀ || ೨ ||
ಮೌನಮನವು ಕಾಯುತಿದೆ ನಿನ್ನ ವರವ
ಅಂತರಂಗವು ಬೇಡುತಿದೆ ನಿನ್ನ ಕರುಣೆಯ |
ನಿನ್ನ ಮಹಿಮೆಯು ನಮಗೆ ಅಮೃತವಾಗಲೀ
ಸುಮಾರ್ಗದಿ ನೆಡೆದು ನಿನ್ನ ಪಾದವ ಸೇರುವಂತಾಗಲೀ || ೩ ||
No comments:
Post a Comment