ಒಟ್ಟು ನೋಟಗಳು

Thursday, April 12, 2018

ಗುರುನಾಥ ಗಾನಾಮೃತ 
ಗುರುನಾಥ ಗುರುನಾಥ ಗುರುನಾಥ
ರಚನೆ: ಅಂಬಾಸುತ 


ಗುರುನಾಥ ಗುರುನಾಥ ಗುರುನಾಥ
ಅವಧೂತ ಸದ್ಗುರುನಾಥ ಗುರುನಾಥ ||ಪ||

ಗುಣಪೂರ್ಣ ಮಹಿಮನೊ ಗುರುನಾಥ
ಗೌಪ್ಯತೆಯ ಸಾಧನೆಯೊಳಗೆ ಗುರುನಾಥ
ಅಗಣಿತ ಲೀಲಾವಿನೋದಿ ಗುರುನಾಥ
ಅಪ್ರಮೇಯ ಅನಂತ ಗುರುನಾಥ ||೧||

ಅಲ್ಪತೆಯ ಅಳಿಸುವಾ ಗುರುನಾಥ
ಅತಿ ಬೃಹತ್ ಎನಿಸಿಹಾ ಗುರುನಾಥ
ಅರಿತವನ ಅರಿವಾಗಿ ಇಹನು ಗುರುನಾಥ
ಮರೆತವನ ಮರೆವೂ ಅವನೇ ಗುರುನಾಥ ||೨||

ಅಳು ನಗುವಿನೊಳಗು ಅವಿತವನು ಗುರುನಾಥ
ಆನಂದ ಮೂರುತಿ ಅನವರತ ಗುರುನಾಥ
ಮೌನದೊಳು ಮಾತಿನೊಳು ಗುರುನಾಥ
ಮುತ್ತಂತೆ ಮೆರೆದಿಹಾ ನಮ್ಮ ಗುರುನಾಥ ||೩||

No comments:

Post a Comment