ಗುರುನಾಥ ಗಾನಾಮೃತ
ಮಹನೀಯ ಮಹಾಮಹಿಮ ನನ್ನ ಗುರುವು
ರಚನೆ: ಆನಂದರಾಮ್, ಶೃಂಗೇರಿ
ಮಹನೀಯ ಮಹಾಮಹಿಮ ನನ್ನ ಗುರುವು
ಸದ್ಗುರುವು ಸದಾ ಕಾಯ್ವನು ನನ್ನ ಗುರುವು ।।
ನಿರ್ಧಯಿಯೂ ನಿಷ್ಟೂರನೂ ಪಾಪಿಗಳಿಗೆ
ಸಂಹರಿಸುವನು ಮನದ ಅಹಂಕಾರವನು ।। ೧ ।।
ದಹಿಸುವನು ಮನದ ಮತ್ಸರವನು ಗುರುವು
ಅಳಿಸಿ ದಾರಿದ್ರವನು ಗುರುವು ಸಲಹುವನು ।। ೨ ।।
ಕಾಣದಾ ಊರಲು ನೀನಿರಲು ಸಲಹುವನು
ನಮ್ಮ್ ಗುರುವು ಅನು ದಿನವು ಅನುಕ್ಷಣವು
ಎಲ್ಲಾ ತಿಳಿದವನಂತೆ ನಟಿಸುವ ಮನುಜನು
ನಿಮ್ಮೆದುರಲ್ಲೇ ಮಾತಿಲ್ಲದೆ ಮೂಕನಾಗುವನು ।। ೩ ।।
ಶ್ರೀಮಂತಿಕೆಯ ಸೋಗು ಕಳಚಿ ಬೀಳುವುದು
ಕೃಪೆದೋರಿ ಹರಸುವಿರಿ ಶ್ರೀ ಸಾಮಾನ್ಯಾನು ।। ೪ ।।
ಕಪಟ ಬಕುತಿಗಿಲ್ಲ ನಿಮ್ಮೆದುರು ಸ್ಥಾನಮಾನ
ನಿಜ ಬಕುತನಿಗಿದೆ ಬಲು ಪ್ರೀತಿಯ ಸಮ್ಮಾನ
ಗುರುನಾಥ ಗುರುನಾಥಾ ಎಂದಾಗಬೇಕೊ || ೫ ||
No comments:
Post a Comment