ಒಟ್ಟು ನೋಟಗಳು

Thursday, April 26, 2018

ಗುರುನಾಥ ಗಾನಾಮೃತ 
ಅಣುವಿನೊಳಗೂ ನಿನ್ನ ಬಿಂಬವಾ
ರಚನೆ: ಅಂಬಾಸುತ 


ಅಣುವಿನೊಳಗೂ ನಿನ್ನ ಬಿಂಬವಾ
ಕಾಣುವ ಗುರುತರ ಭಾಗ್ಯವ ನೀಡೈ ಗುರುವೇ ||ಪ||
ಅರಿಯದೆ ಅಲೆದಿಹೆನೊ ಮರವಿನೋಳು ಸಿಲುಕಿಹೆನೊ ||ಅ ಪ||

ಸಗುಣರೂಪಧಾರೀ ನಿನ್ನ ಸನ್ನಿದ್ಧಿಯೊಳು
ಮನವೇಕೊ ನಿಲ್ಲದಾಗಿದೆ
ಮೂಢನ ಮಾತಿಗೆ ಮರುಳಾಗಿಹೆನಾ
ನಿನ್ನ ಕಾಣದೆ ಮಂಕಾಗಿಹೆ ನಾ ||೧||

ವಿಷಯದ ವಿಷಮ ವಿಷ
ಈ ಕಣ್ಣನು ಮಂಜಾಗಿಸಿದೆ
ಕೋಟಿಯೊಳು ಇರುವ ಲಕ್ಷ್ಯ
ಕರುಣಾಳು ನಿನ್ನನು ಮರೆಮಾಚಿದೆ ||೨||

ತೃಣ ನಾ ಮಹತ್ತು ನೀ
ದೀನ ನಾ ದಾನಿ ನೀ
ಬೇಡೋ ಕೈ ಎನ್ನದಯ್ಯಾ
ನೀಡೋ ಕೃಪಾಳು ನೀನಯ್ಯಾ ||೩||

ಸದ್ಗುರು ಸಖರಾಯಪುರಾಧೀಶ
ಅಂಬಾಸುತನಾ ಸರ್ವೇಶಾ
ಸರ್ವರೊಳೂ ಸಮಸ್ತದಲೂ
ನೀ ಕಾಣೋ ಗುರುದೇವಾ ||೪||

No comments:

Post a Comment