ಒಟ್ಟು ನೋಟಗಳು

Thursday, April 19, 2018

ಗುರುನಾಥ ಗಾನಾಮೃತ 
ಗುರುವೆಂದು ಒಮ್ಮೆ  ಸ್ಮರಿಸಬಾರದೇ 
ಹೇ ಮನುಜ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಗುರುವೆಂದು ಒಮ್ಮೆ  ಸ್ಮರಿಸಬಾರದೇ ಹೇ ಮನುಜ 
ನೀನೇ ಗತಿಯೆಂದು ಗುರುವ ನಮಿಸಬಾರದೇ  |

ಮಡದಿಮಕ್ಕಳ ಸುಖದಿ ಮುಳುಗಿ
ಧನಕನಕಗಳ ಗಳಿಕೆಯಲಿ ತೊಡಗಿ |
ಭೋಗಭಾಗ್ಯಗಳ ಸಿರಿಯಲಿ ಮೆರೆಯುತ
ಮಾನಸಮ್ಮಾನಗಳಲಿ ಸಾರ್ಥಕತೆಯನು ಕಾಣುತಾ || ೧ ||

ಕರ್ಮದ ಬಲೆಯಲಿ ನೊಂದು 
 ಕಷ್ಟಕಾರ್ಪಣ್ಯಗಳಲಿ ಬೆಂದು  |
 ಶಾಶ್ವತಮನೆಯನು ಅರಸುತಾ
ಭವದಿ ಎಲ್ಲೆಡೆ ಅಲೆಯುತಾ || ೨ ||


ಮೋಹಪಾಶದಿ ಸಿಲುಕಿರುವಾಗ
ಅಹಂಕಾರದಿ ಮೆರೆಯುವಾಗ |
ನಾಮಸ್ಮರಣೆಯ ಮರೆತಿರುವಾಗ
ವ್ಯರ್ಥದಿ ಆಯುಷ್ಯವ ಕಳೆಯುವಾಗ || ೩ ||

No comments:

Post a Comment