ಒಟ್ಟು ನೋಟಗಳು

Monday, April 16, 2018

ಗುರುನಾಥ ಗಾನಾಮೃತ 
ಕರೆದರೆ ಬಾರದಿರೆಯಾ ಗುರುರಾಯ
ರಚನೆ: ಅಂಬಾಸುತ 


ಕರೆದರೆ ಬಾರದಿರೆಯಾ ಗುರುರಾಯ
ಕರುಣಾಸಾಗರನೆಂಬಾ ಬಿರುದು ಪೊತ್ತವನೇ ||ಪ||

ಮತಿ ನೀಡೆಂದು ಬೇಡಲು ಕರೆಯುತಿಹೆನಯ್ಯ
ಗತಿ ನೀನೇ ಎಂದು ಪೇಳಲು ಕರೆಯುತಿಹೆನಯ್ಯ
ಸ್ಥಿತಿಯು ನಿನ್ನಿಂದಲೆ ಎನಲು ಕರೆಯುತಿಹೆನಯ್ಯ
ಈ ಕರೆಯು ಕೇಳದೇ ಎನ್ನ ಗುರುರಾಯಾ ||೧||

ಅನರ್ಥಕಾರಿ ಅರ್ಥವ ಬೇಡಲು ಕರೆಯೆನಯ್ಯ
ಆಯುಷ್ಯ ಆರೋಗ್ಯಕ್ಕಾಗಿ ನಿನ್ನ ಕರೆಯೆನಯ್ಯ
ಸತಿ ಸುತರ ಬೇಡಲು ನಿನ್ನ ಕರೆಯೆನಯ್ಯ
ಸುಮತಿಯ ನೀಡು ಬಾರೊ ಎನ್ನ ಸದ್ಗುರುರಾಯಾ ||೨||

ಕ್ಷಿತಿಯೊಳಗುತ್ತಮ ನೀನೆಂದು ನಂಬಿದೆ ನಾ
ಅತೀ ದೀನನಾಗಿ ನಿನ್ನ ನಂಬಿದೆ ನಾ
ನಾನತ್ವ ಕಳೆಯುವವ ನೀನಯ್ಯ ಗುರುರಾಯ
ಅಂಬಾಸುತನಾ ಸದ್ಗುರು ಸಖರಾಯಪುರಾಧೀಶಾ||೩||

No comments:

Post a Comment