ಒಟ್ಟು ನೋಟಗಳು

Thursday, April 26, 2018

ಗುರುನಾಥ ಗಾನಾಮೃತ 
ಸುಲಭಕೆ ಸಿಗನೋ ಗುರುವರನು 
ರಚನೆ: ಅಂಬಾಸುತ 


ಸುಲಭಕೆ ಸಿಗನೋ ಗುರುವರನು 
ತಾ ಸಾಧನೆಯೊಳಗೆ ಅಡಗಿಹನೋ ||ಪ||

ಪುಣ್ಯದ ಗಂಟನು ಹೊತ್ತು ಹುಟ್ಟಿರಬೇಕೊ
ಹಿರಿಯನ ಘನ ಹಾರೈಕೆ ಇರಬೇಕೊ
ಗುಣಪೂರ್ಣ ಮಾತಾ ಪಿತರೊಡನಿರಬೇಕೊ
ಮಿಗಿಲಾಗಿ ನಿನ್ನೊಳು ತುಡಿತವಿರಬೇಕೊ ||೧||

ಸತ್ಸಂಕಲ್ಪವ ನೀ ಮಾಡಿರಬೇಕೊ
ಸಾಧು ಸಜ್ಜನರಾ ಸೇವಿಸಬೇಕೊ
ಸತ್ಸಂಗದೆ ಕಾಲಕ್ಷೇಪವಿರಬೇಕೊ
ಮಿಗಿಲಾಗಿ ಧೃಢಭಕ್ತಿ ನಿನ್ನೊಳಗಿರಬೇಕೊ ||೨||

ಗುರು ಕರುಣೆಗೆ ನೀ ಪಾತ್ರನಾಗಬೇಕೊ
ಮನದೊಳು ಗುರುಮನೆ ಮಾಡಿರಬೇಕೊ
ಏಕಚಿತ್ತದಿ ಗುರುಸೇವೆ ಮಾಡಬೇಕೋ
ಮಿಗಿಲಾಗಿ ಗುರುವಿನಲಿ ದ್ವಂದ್ವ ಬಿಡಬೇಕೊ ||೩||

ಚಿಂತನ ಮಂಥನ ಗುರುವೆಂದಾಗಬೇಕೊ
ದೃಷ್ಠಿಹೊದಲೆಲ್ಲಾ ಗುರು ಕಾಣಬೇಕೊ
ಆದ ಕಾರ್ಯವೆಲ್ಲಾ ಗುರುವಿನಿಂ ಎನಬೇಕೊ
ಮಿಗಿಲಾಗಿ ಗುರುವೇ ಗತಿ ಎನಬೇಕೊ ||೪||

ಸಖರಾಯ ಸಖರಾಯ ಎನುತಿರಬೇಕು
ನಿಜಸುಖದಾಯಕ ನೀನೆನಬೇಕೊ
ಅಂಬಾಸುತನಾ ಈ ಪದದೊಳಗೆಲ್ಲಾ
ಗುರುನಾಥ ಗುರುನಾಥಾ ಎಂದಾಗಬೇಕೊ ||೫||

No comments:

Post a Comment