ಗುರುನಾಥ ಗಾನಾಮೃತ
ಗುರುನಾಥ ನೀನಾದೆ ನಮ್ಮ ಬಾಳಿಗೆ ಆಧಾರ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ನೀನಾದೆ ನಮ್ಮ ಬಾಳಿಗೆ ಆಧಾರ
ಎಂದೂ ಬಾಡದ ನಗುಮೊಗದ ಮಂದಾರ |
ಭವದಿ ನೀನಿತ್ತ ಬದುಕಿನಲಿ
ನಶ್ವರದಾ ಈ ಕಾಯದಲಿ |
ಕೈ ಬಿಡದೆ ನೀನೆಮ್ಮ ಕಾಪಾಡಿದೆ
ಗುರುನಾಥ ನೀನೆಮಗೆ ಬಂಧುವಾದೆ || ೧ ||
ಕಷ್ಟಗಳ ಮಳೆ ಸುರಿಯಲೀ
ನೋವಿನ ಗುಡುಗು ಶಬ್ದಗೈಯಲಿ |
ಬೆಳಕಿನ ದಾರಿಯಾ ನೀ ತೋರಿಸಿದೆ
ಗುರುನಾಥ ನಮ್ಮನ್ನು ನೀನುಳಿಸಿದೆ || ೨ ||
ಜೀವನದಿ ಏನಾದರೂ ಬರಲಿ
ಎಂತಾದರೂ ಕಳೆದು ಹೋಗಲೀ |
ಬೊಗಸೆಯೊಡ್ಡಿ ಬೇಡುವೆನೊಂದು ಭಿಕ್ಷೆ
ಗುರುನಾಥ ನಮಗಿರಲೆಂದಿಗೂ ನಿನ್ನ ಕೃಪಾರಕ್ಷೆ || ೩ ||
No comments:
Post a Comment