ಗುರುನಾಥ ಗಾನಾಮೃತ
ಯಾಕೆ ಬರಿ ಮಾತು ಪದಗಳಲಿ ನನ್ನ ಗುರುವ ನೆನೆವೆ
ರಚನೆ: ಆನಂದರಾಮ್, ಶೃಂಗೇರಿ
ಯಾಕೆ ಬರಿ ಮಾತು ಪದಗಳಲಿ ನನ್ನ ಗುರುವ ನೆನೆವೆ
ಅಂತರಂಗ ಶುದ್ದಿಗೊಳಿಸಿ ಮೌನದಿ ಬಜಿಸು ಮನವೇ|
ಗುರುವಿಗೆ ನೀಡಲು ಏನೂ ಇಲ್ಲಾ ಎಂದೆನಿಸ ಬೇಡ
ಭಕ್ತಿಯಲಿ ಬೇಡಿದರೆ ಅವನೇ ನೀಡುವನು ಎಲ್ಲಾ|
ಆ ಪಾದ ನೆನೆದರೆ ಮನಕೆ ಶಾಂತಿ ದೊರುವುದೆಲ್ಲಾ
ಮತಿ ಹೀನನು ನಾನು ಸುಮ್ಮನೇ ಕಾಲ ಕಳೆದನಲ್ಲಾ|
ಊರೂರು ಸುತ್ತಿದರೂ ಸಿಗಲಿಲ್ಲ ಆ ನನ್ನ ಗುರುವು
ಬಳಿ ಇದ್ದರೂ ಅರಿವಾಗಲು ತಡವಾಯ್ತು ಗುರುವು|
ಕರ್ಮ ಕಳೆಯದೇ ಯಾರಿಗೂ ನೀ ಸಿಗುವವನಲ್ಲಾ
ನಿಜ ಬಕುತನ ಹರಸಿ ಜೊತೆ ಬಂದು ಕಾಯ್ವೆಯಲ್ಲಾ|
ಆಡಂಬರದ ಬಕುತಿಯ ಎಂದೂ ನೀ ಒಪ್ಪುವವನಲ್ಲ
ನಿನ್ನೆದುರು ತೋರಿಕೆಯ ಬಕುತಿಗೆ ಮನ್ನಣೆಯೇ ಇಲ್ಲಾ|
No comments:
Post a Comment