ಗುರುನಾಥ ಗಾನಾಮೃತ 
ಮರುಳಾಗ ಬೇಡವೋ ಮನವೇ ಮರುಳಾಗಬೇಡ
ರಚನೆ: ಆನಂದರಾಮ್, ಶೃಂಗೇರಿ  
                                ಮರುಳಾಗ ಬೇಡವೋ ಮನವೇ ಮರುಳಾಗಬೇಡ                               
ನಿನ್ನರಿವಿಲ್ಲದೆ ಏನೇನೋ ನುಡಿಯುವ   ಮೊದಲು ನೆನೆ  ಗುರುನಾಥನ   
ಪಾದಾರವಿಂದದ  ದೂಳ ತಿಲಕವನಿಟ್ಟು
ಪಾದಪೂಜೆಯ ತೀರ್ಥವ ಸೇವಿಸುತ
ಗುರು ನಡೆದಾಡಿದ ದಾರಿಯಲಿ ಹೊರಳಾಡಿ
ಪಾವನ ಗೊಳಿಸಿಕೊ ನಿನ್ನ ಜೀವನವ ಮರುಳ
ನಾನು ನನ್ನದೆಂದು ಇಲ್ಲದನು ಹಂಬಲಿಸುತ
ಹುರುಳಿಲ್ಲದ ವ್ಯರ್ಥ ಬದುಕು  ಕಟ್ಟುತ
ಅನ್ಯರ ದೂಷಿಸುತ  ಕಾಲ ಕಳೆಯುತಲಿ
                                        ನೀನೇ ಮೇಲೆಂದು ಮೆರೆಯಬೇಡವೋ ಮರುಳ                                        
ಮೂರು ದಿನದಾ ಈ ಬದುಕು ನಡೆಸಲು
ಬೇಕೆಮಗೆ ಗುರುವಿನ ಕರುಣೆಯ ಹೊನಲು
ಬರೀ ಜಂಜಾಟದ ಈ ಬದುಕಲಿ ಗುರುವ
ನೆನೆದು ಸೇವಿಸಿ ಬದುಕು ಹಸನಾಗಲಿ ಮರುಳ

No comments:
Post a Comment