ಒಟ್ಟು ನೋಟಗಳು

Sunday, April 22, 2018

ಗುರುನಾಥ ಗಾನಾಮೃತ 
ಗುರುವರನ ಮೂರುತಿಯ ಇರಿಸು ಮನದೊಳಗೇ
ರಚನೆ: ಅಂಬಾಸುತ 


ಗುರುವರನ ಮೂರುತಿಯ ಇರಿಸು ಮನದೊಳಗೇ
ನಿತ್ಯ ಮಾನಸ ಪೂಜೆಯ ನೆಡೆಸು ಸಂಭ್ರಮದೊಳಗೇ ||ಪ||

ಆಡಂಬರದ ಬಾಹ್ಯ ಪೂಜೆ ಬೇಡನು ಅವನು
ಆದಿಮೂರುತಿ ಗುರು ನಿರಾಕಾರ ನಿರ್ಗುಣನು ||೧||

ಶುದ್ಧಭಾವದ ಪುಷ್ಪ ಅವನಡಿಗೆ ಅರ್ಪಿಸೋ
ಗುರುವಾಕ್ಯಕ್ಕೆ ಬದ್ದನಾಗಿ ಜೀವನವ ನೆಡೆಸೋ ||೨||

ಆರರಾ ದೋಷವ ಮನದಿಂ ಆಚೆಗೆ ಹಾಕುತಾ
ಪರರ ಚಿಂತೆಯ ಬಿಟ್ಟೂ ಪ್ರೇಮ ಅವನೊಳಗಿಟ್ಟೂ ||೩||

ಅಂತರಂಗದ ಕಣ್ಣ ತೆರೆಸುವವನು ಅವನೂ
ಅರಿವಿನಾ ಆಲಯಕೆಮ್ಮ ಕರೆದೊಯ್ಯುವನೂ ||೪||

ಸಖರಾಯನ ದಾಸನಾಗಿ ನಿಜಸುಖವ ನೀಡೆಂದು
ಬೇಡಿಹಾ ಅಂಬಾಸುತನ ಸಲಹೋ ಪ್ರಭುವೇ ಎಂದೂ ||೫||

No comments:

Post a Comment