ಗುರುನಾಥ ಗಾನಾಮೃತ
ಪರಮಪಾವನ ಗುರುಪದ ಮೋಕ್ಷಸಾಧನಾ
ರಚನೆ: ಅಂಬಾಸುತ
ಪರಮಪಾವನ ಗುರುಪದ ಮೋಕ್ಷಸಾಧನಾ
ಗುರುಪದ ಮೋಕ್ಷಸಾಧನಾ
ಪಾಲಿಸಿದೆಡೆ ಪರಮಾನಂದದ ಪುಣ್ಯ ದರ್ಶನಾ ||ಪ||
ನಾನೆಂಬುದ ತೊರೆ ನನ್ನದೆಂಬುದಾ ನೀ ಮರೆ
ನನ್ನದೆಂಬುದ ನೀ ಮರೆ
ಎನುತ ಎಮ್ಮಹಂಕಾರ ಕಳೆವ ಗುರಪದ ಪಾವನಾ ||೧||
ಕೂಡಿಡಲೂ ಬೇಡಾ ಅದ ನಾಳೆಗೆ ಎನಬೇಡಾ
ಅದ ನಾಳೆಗೆ ಎನಬೇಡಾ
ಎನುತ ದಾನ ಧರ್ಮ ಕಲಿಸಿದ ಗುರುಪದ ಪಾವನಾ ||೨||
ಸತಿಗೆ ಪತಿ ದೈವ ಪತಿಗೆ ಪರಮತಿಯೇ ದುರ್ದೈವಾ
ಪತಿಗೆ ಪರಮತಿಯೇ ದುರ್ದೈವಾ
ಎನುತ ಸತಿಪತಿಯರ ನಿಷ್ಠೆ ಬೋಧಿಸಿದ ಗುರುಪದ ಪಾವನಾ ||೩||
ಗುರುಪಾದ ಸೇವನಾ ಗುರುಪದದಾ ಮನನಾ
ಸದ್ಗುರುಪದದಾ ಮನನಾ
ಸರ್ವದೋಷಹರಣ ಕಾರಣ ಗುರುಪದ ಪಾವನಾ ||೪||
ಶ್ರಮದ ಆಶ್ರಮ ಎಂದಿಗೂ ಸಿಗದೋ ಆರಾಮ
ಎಂದಿಗು ಸಿಗನೋ ಆ ರಾಮ
ಎನುತ ಆತ್ಮರಾಮನ ತೋರಿದ ಗುರುಪದ ಪಾವನಾ ||೫||
ಸಖರಾಯಪುರಾಧೀಶ ಸದ್ಗರು ಪೇಳಿದಾ ಪದಾ
ಸದ್ಗುರು ಪೇಳಿದಾ ಪದಾ
ಅಂಬಾಸುತನ ಈ ಪದಕೆ ಕಾರಣ ಗುರುಪದ ಎಮ್ಮ ಸದ್ಗುರು ಪೇಳಿದಾ ಪದ ||೬||
No comments:
Post a Comment