ಗುರುನಾಥ ಗಾನಾಮೃತ
ಭಿಕ್ಷಾಕೆ ಬಂದಿಹನು ಗುರುವು
ರಚನೆ: ಅಂಬಾಸುತ
ಭಿಕ್ಷಾಕೆ ಬಂದಿಹನು ಗುರುವು
ಬೇರೆ ನೆಪವಾ ಬಿಟ್ಟು ಬಂದು ಭಿಕ್ಷಾವ ಹಾಕಿರಮ್ಮ ||ಪ||
ಸಾಕ್ಷಾತ್ ಶಂಕರನು ಗುರುವೂ
ಸೋಗಿಲ್ಲದ ಮನದಿಂದ ಭಿಕ್ಷಾವ ಹಾಕಿರಮ್ಮ
ಸಾಗುವುದು ನಿಮ್ಮ ದುರಿತವು
ಸಮರ್ಪಣೆಯ ಭಾವದಲಿ ಭಿಕ್ಷಾವ ಹಾಕಿದೆಡೆ ||೧||
ನಗನಾಣ್ಯದ ರಾಶಿಯ ಕೇಳನು
ನಗುಮೊಗದಿಂದಲಿ ಬೇಗ ಭಿಕ್ಷಾವ ಹಾಕಿರಮ್ಮ
ಶುದ್ಧಭಾವದ ಮನವಾ ಬೇಡಿಹನು
ಬದ್ದನಾಗುತ ನಿಮ್ಮನು ಕಾಯ್ವ ಭಿಕ್ಷೆಯ ಕೊಂಡು ||೨||
ಸಖರಾಯಪುರದಿಂದ ಗುರುವು
ಬಂದಿಹನು ನಿಮಗಾಗಿಯೇ ಭಿಕ್ಷಾವ ಹಾಕಿರಮ್ಮ
ಅಂಬಾಸುತನಾ ಮೊರೆ ಇದು ಕೇಳಿರಮ್ಮಾ
ಗುರುಭಿಕ್ಷಾವ ನೀಡಿ ಧನ್ಯರಾಗಿರಮ್ಮಾ ||೩||
No comments:
Post a Comment