ಗುರುನಾಥ ಗಾನಾಮೃತ
ಬರಿದಾದ ಮನದಲಿ ನಿನ್ನ ನಾಮ ಮೂಡಿ ಬರಲು
ರಚನೆ: ಆನಂದರಾಮ್, ಶೃಂಗೇರಿ
ಬರಿದಾದ ಮನದಲಿ ನಿನ್ನ ನಾಮ ಮೂಡಿ ಬರಲು
ತಡ ಮಾಡದೆ ಮೈ ಮರೆತು ನಿನ್ನ ಜಪಿಸುವೆ ಗುರುವೇ|
ಇದು ಎನ್ನ ಸುಕೃತವೋ ಕಾಯಕವೋ ಅರಿವಿಲ್ಲಾ
ನಿರಂತರ ನಿನ್ನ ಬಜಿಸುವ ಬಾವ ನೀಡೋ ಗುರುವೇ|
ಅರಿವಿರದೇ ನಾ ಮಾಡಿದ ಕರ್ಮಗಳು ನೂರಾರು
ಪರಿಹರಿಸಿ ಉದ್ಡರಿಸು ಬೇಡಲು ಎನ್ನ ಗುರುವೇ |
ಹರಿ ಹರರೂ ಬೇಡಿದರು ಕೊಡಲೊಲ್ಲರು ಎಲ್ಲಾ
ನೀ ನೀಡಿದರು ಈ ಪಾಮರಗೆ ಅರಿವಾಗಲೇ ಇಲ್ಲಾ|
ನಾನು ನಾನೆಂಬ ಅಹಂ ದೇಹದಲಿ ತುಂಬಿದೆಯಲ್ಲಾ
ಎಲ್ಲಾ ನೀನೆಂಬುದು ಅರಿವಾಗಾದೆ ಹೋಯಿತಲ್ಲಾ"|
ಕಪಟ ಮನಕೆ ಕುಹುಕ ನುಡಿಗೆ ಮನ್ನಣೆಯೇ ಇಲ್ಲಾ
ಶುದ್ದ ಬಾವಕೆ ಬೇಡದೆಯು ನೀ ಹರಸುವೆಯಲ್ಲ|
ನಿನ್ನ ಕಾಯಕ ನೀ ಮಾಡು ದುರಾಸೆ ಬೇಡವೆಂದಿರಲ್ಲಾ
ನಿಮ್ಮೊಳಗಿನ ಆನಂದ ಎಲ್ಲೆಲ್ಲೊ ಹುಡುಕದಿರಿ ಎಂದ|
No comments:
Post a Comment