ಒಟ್ಟು ನೋಟಗಳು

Sunday, April 29, 2018

ಗುರುನಾಥ ಗಾನಾಮೃತ 
ಇಂಥಾ ಗುರುವ ಕಂಡಿರಾ ಜಗದಲ್ಲಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಇಂಥಾ ಗುರುವ ಕಂಡಿರಾ ಜಗದಲ್ಲಿ
ಇಂಥಾ ಗುರುವ ಕಂಡಿರಾ !

ಭಕ್ತರ ಭಾವ ಹೆಚ್ಚಿಸುವ ಅಜನಿವನು
ಆರ್ತರನು ಪಾಲಿಸೋ ಹರಿಯಿವನು |
ದುರಿತವ ದೂರಿಡುವ ಹರನಿವನು
ಸಕಲರನೂ ಪೊರೆಯೋ ಭಗವಂತನಿವನು || ೧ ||

ಜೀವಿಗಳ ಬೆಳಗುವ ಜೀವೇಶ್ವರನು
ಅರಿವನು ತೋರಿಸೋ ಭಾಸ್ಕರನು |
ಮನದಲಿ ಸದಾ ಭಜಿಸುವ ಗೌರೀಶ್ವರನು
ಬಂಧನವ ಕಳೆಯುವ ಮಹೇಶ್ವರನು   || ೨ ||

ಜ್ಞಾನವ ನೀಡುವ ಬ್ರಹ್ಮನಿವನು 
ಪ್ರಣವದ  ಪ್ರಮತಿಯ ಚತುರ್ಮುಖನು |
ಆತ್ಮ ಸಾಕ್ಷಾತ್ಕರಿಸುವ ಸೃಷ್ಟಿಕರ್ತನು
ಎಲ್ಲರಲೂ ನೆಲೆಸಿಹ ಸನಾತನನು || ೩ ||

ಶುಭಯೋಗ ತರುವ ಯೋಗೀಂದ್ರನು
ಚಿತ್ಸುಖ ಕೊಡುವ ಚಿನ್ಮಯನು |
ಭಕ್ತಭಾವಗಮ್ಯನಾದ ಸುರೇಶನು 
ಭಕ್ತರ ಪಾಲಿಸುವ ಭುಜಗಶಯನನು || ೪ ||

No comments:

Post a Comment