ಒಟ್ಟು ನೋಟಗಳು

Sunday, April 29, 2018

ಗುರುನಾಥ ಗಾನಾಮೃತ 
ಬಾಗಿಲೊಳು ಬಿದ್ದಿಹಾ ಯಾಚಕನು ನಾನು
ರಚನೆ: ಅಂಬಾಸುತ 


ಬಾಗಿಲೊಳು ಬಿದ್ದಿಹಾ ಯಾಚಕನು ನಾನು
ಅವಧೂತ ಗುರುನಾಥ ಪೊರೆಯಯ್ಯ ನೀನು ||ಪ||

ಬೇಡಲು ತಿಳಿಯೋಲ್ಲ ಅತಿಮೂಢ ನಾನು
ಹಿತವನ್ನೇ ನೀಡಿ ಹರಸುವವ ನೀನು ||೧||

ಹಸಿವಿಲ್ಲದೆ ಹುಸಿಯಿಲ್ಲದೆ ಬಂದಿಹೆನೊ ನಾನು
ಭಕ್ತಿರಸವನ್ನಿತ್ತು ದರುಶನ ನೀಡೋ ನೀನು ||೨||

ಧನ ಕನಕ ದೊರೆತನವ ಬೇಡೋಲ್ಲ ನಾನು
ದೀನರಕ್ಷಕ ಆಶ್ರಯ ನೀಡೋ ನೀಡೋ ನೀನು ||೩||

ಸಖರಾಯಪುರವಾಸೀ ಸದ್ಗುರುನಾಥ ನೀನು
ವಾಣೀಪ್ರಿಯ ದಾಸಿ ನಿನ್ನ ಚರಣದೊಳಿಹೆ ನಾನು ||೪||

No comments:

Post a Comment