ಗುರುನಾಥ ಗಾನಾಮೃತ
ನಿನ್ನ ಚರಣಸೇವೆಯಿಂದೆಂದಿಗೂ ದೂರಮಾಡದಿರಯ್ಯಾ ಗುರುವೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ನಿನ್ನ ಚರಣಸೇವೆಯಿಂದೆಂದಿಗೂ ದೂರಮಾಡದಿರಯ್ಯಾ ಗುರುವೇ
ನಿನ್ನ ದಯಾಭಿಕ್ಷೆಯಿಂದಾ ಎಂದಿಗೂ ದೂರಮಾಡಬೇಡಯ್ಯಾ ನನ್ನ ದೊರೆಯೇ ||
ನಿನ್ನ ಪದಪೂಜೆಯೆನಗೆ ಸದಾ ದೊರಕಲಿ ಪ್ರಭುವೇ
ನಿನ್ನ ವಚನಾಮೃತಪಾನವು ಸದಾ ಕೇಳಲಿ ನನಗೆ |
ನಿನ್ನ ಚರಣಸ್ಪರ್ಶದ ಧೂಳಿರಲಿ ಸದಾ ಮನೆಗೆ
ನಿನ್ನ ಅನವರತ ಸ್ತುತಿಯು ಚೈತನ್ಯನೀಡಲಿ ಮನಕೆ || ೧ ||
ಭವದ ಬವಣೆಯು ಬಾಧಿಸದಿರಲಿ ನಮಗೆ
ನೀನೇ ಬೇಕೆಂಬ ಭಾವ ಸ್ಥಿರವಾಗಿರಲೆಮಗೆ |
ನಿನ್ನ ನಾಮವೇ ನೀರು ಅಶನವಾಗಲೀ ಎಮಗೆ
ನಿನ್ನ ಕಾರುಣ್ಯಮೂರ್ತಿಯು ಹೃದಯದಿ ಸದಾ ತುಂಬಿರಲೆನಗೆ || ೨ ||
No comments:
Post a Comment