ಒಟ್ಟು ನೋಟಗಳು

Saturday, April 28, 2018

ಗುರುನಾಥ ಗಾನಾಮೃತ 
ಸಕ್ರೆಪಟ್ನದ ಸದ್ಗುರುನಾಥ ಸಮರ್ಥನಿದ್ದಾನೆ
ರಚನೆ: ಅಂಬಾಸುತ 


ಸಕ್ರೆಪಟ್ನದ ಸದ್ಗುರುನಾಥ ಸಮರ್ಥನಿದ್ದಾನೆ
ಬೋಧ್ನೆ ಮಾಡ್ತಾ ತನ್ ಭಕ್ತ್ರಿಂದ ಸಾಧ್ನೆ ಮಾಡ್ಸ್ತಾನೆ ||ಪ||

ಆಸೆ ಹಿಂದೆ ಆತಂಕೈತೆ ಬಿಡ್ರೋ ಎಂದಾನೆ
ಹಿಡಿ ಗುರುಪಾದ್ವ ಆನಂದೈತೆ ಎಂದು ನಕ್ಕಾನೆ ||೧||

ಹೆತ್ತೌವ್ರೇ ಹಿರಿದೈವ ಹತ್ತು ದೇವ್ರ್ಯಾಕೆ ಅಂದೌನೆ
ಕೆಟ್ದೇನೈತೆ ಎಲ್ರೊಳ್ಗು ಸರಿ ಕಾಣ್ ಅಂದಾನೆ ||೩||

ಮಾತ್ ಬಿಟೌವ್ನೇ ಯೋಗಿ ಕಟ್ಟುಕೊಂಡೌನೇ ಭೋಗಿ
ರಟ್ಟೆ ತಟ್ಟೆ ಬಟ್ಟೆ ಮೂಟೆ ಬಿಟ್ಟೌನೇ ತ್ಯಾಗಿ ಎಂದಾ ||೩||

ಕೂಡಿಟ್ಟಿದ್ದು ಕೆಟ್ಹೋಗುತ್ತೆ ಕಟ್ಕೊಳ್ತೀ ಪಾಪ
ಹಂಚ್ದೋನ್ ಪುಣ್ಯ ಹೆಚ್ಚಾಗುತ್ತೆ ತಿಳ್ಕೊಳ್ರೋ ಪಾಪ ||೪||

ಆಡಿದ್ದನ್ನೇ ಮಾಡೋನು ಲೋಕ್ದೊಳ್ಗೇ ಹೆಚ್ಚೂ
ಸುಳ್ಳು ಪೊಳ್ಳು ಅನ್ನೋನು ಹಚ್ತಾನೆ ಕಿಚ್ಚೂ ||೫||

ಅನ್ನ ನೀರು ನೀಡೋದ್ರಲ್ಲೇ ಆನಂದ ಅಪ್ಪ
ಚೌಕಾಶೀಲಿ ಏನೇ ತಂದ್ರೂ ನೀನಾಗ್ತಿ ಬೆಪ್ಪ ||೬||

ಧರ್ಮ ಕರ್ಮದ್ ಮರ್ಮ ತಿಳಿರೊ ದಡ್ರಾಗ್ಬೇಡ್ರೋ
ಮುಟ್ಟು ಮೈಲ್ಗೆ ಮಡಿ ಅಂತಾ ಮರುಳಾಗ್ಬೇಡ್ರೋ ||೭||

ಸತ್ ಮೇಲ್ ಮಾಡಿದ್ರೇನ್ ಬಂತ್ರೋ ಭಕ್ಷ್ಯಭೋಜ್ಯನಾ
ಇದ್ದಾಗ್ ಬೀದಿಗ್ ಹಾಕಿ ಹೋದಾಗ್ ಲಕ್ಷ ಖರ್ಚನ್ನ ||೮||

ಬ್ರಹ್ಮನ್ ಕಾಣ್ರೋ ಒಳಗಿದ್ದಾನೆ ಅರಿವಿನ ರೂಪದಲ್ಲೀ
ಅದ್ನ ತೋರ್ಸೊ ಗುರುವನ್ ಹಿಡಿರೊ ನಿತ್ಯ ನೇಮದಲಿ ||೯||

ಅಂಬಾಸುತನ ಈ ಪದಕೆಲ್ಲಾ ಕಾರಣನಾಗೌವ್ನೇ
ಅವ್ನ ನೋಡಿ ಮುಸಿ ಮುಸಿ ಅಂತಾ ಒಳಗೇ ನಕ್ಕೌನೇ ||೧೦||

No comments:

Post a Comment