ಗುರುನಾಥ ಗಾನಾಮೃತ
ಪರಿಹರಿಸೊ ಈ ಭವದಾ ಬಾಧೆಯನ್ನೂ
ರಚನೆ: ಅಂಬಾಸುತ
ಪರಿಹರಿಸೊ ಈ ಭವದಾ ಬಾಧೆಯನ್ನೂ
ಬೇಡೆ ಇನ್ಯಾರನೂ ನೀನೇ ಗತಿ ಎನಗೇ ||ಪ||
ನಿನ್ನ ಹೊರತೆನಗೆ ಯಾರಿಲ್ಲ ಪ್ರಭುವೆ
ನೀನೇ ಆತ್ಮದ ಸಖನು ನೀನೇ ಸುಖದಾತನು||ಅ.ಪ||
ದೀನತನದಲಿ ನಿನ್ನ ಸನ್ನಿಧಿಗೆ ಬಂದಿಹೆನೊ
ಭವದ ಬಹು ಭಾರವನು ಹೊತ್ತು ತಂದಿಹೆನೋ
ಬಳಲಿಹೆನೊ ದೊರೆಯೋ ಬಾಳಲಾರೆನು ಹೀಗೆ
ಕರಿಯ ಕೆಳಗಿರುವಾ ಇರುವರಯಂತೇ ||೧||
ತಾಸಿಪ್ಪತ್ತು ದುಖಃ ನಾಲ್ಕೇ ತಾಸು ಸುಖ
ಆ ಸುಖವೊ ದುಖಃಕ್ಕೆ ಮೂಲವಾಗಿಹುದಯ್ಯ
ಸತಿಸುತರು ಸಿರಿ ಬಯಸಿ ಸೊರಗಿಹರು ಅಯ್ಯೋ
ಸೊಡಲ ಮುತ್ತಿಕ್ಕುವಾ ಪತಂಗದಂತಲೀ ||೨||
ಹರನ ನೆನೆಯದ ಜ್ವರವು ಹರಿನಿಂಧೆ ಹಲವು
ಕುಲಗುರುವ ಜಾಡಿಸಿದಾ ದೋಷದಾ ಬರವು
ದೇಹಿ ಎಂದವರಿಗೆ ಇಕ್ಕಾದ ಬಹು ಶಾಪವೂ
ಇದಕೆಲ್ಲ ಕಾರಣ ಈ ಭವಸಂಸಾರವೂ ||೩||
ಸಖರಾಯಪುರಾಧೀಶ ಶ್ರೀವೇಂಕಟಾಚಲ
ಅವಧೂತ ಅಸಾಮಾನ್ಯ ಅಪ್ರಮೇಯಾ
ಅಂಬಾಸುತ ನಾ ನಿನ್ನಡಿಯಲಿ ಬೇಡಿಹೆನೊ
ಈ ಕೋರಿಕೆಯ ಕೇಳೊ ಕನಿಕರಿಸೊ ಮಹರಾಯಾ ||೪||
No comments:
Post a Comment