ಒಟ್ಟು ನೋಟಗಳು

Friday, April 13, 2018

ಗುರುನಾಥ ಗಾನಾಮೃತ 
ಅಚ್ಚರಿಯ ಭಾಗ್ಯವದು ನೀನರಿಯೊ
ರಚನೆ: ಅಂಬಾಸುತ 


ಅಚ್ಚರಿಯ ಭಾಗ್ಯವದು ನೀನರಿಯೊ
ಗುರುಪಾದ ಸೇವೆಯು ಅಚ್ಚಳಿಯದ ಪುಣ್ಯ ನೀ ತಿಳಿಯೊ ||ಪ||
ಕಲ್ಲುಸಕ್ಕರೆಯಚ್ಚ ಸವಿದಂತೆ
ರಸಾನುಭವವ ನೀನುಭವಿಸೊ ||ಅ.ಪ||

ಸ್ವಚ್ಚ ಮನದಲಿ ಅವನ ಕಾಲ್ಪಿಡಿಯೊ
ರಚ್ಚೆ ಮಾಡದೆ ಅಚ್ಚುತನ್ನ ಅವನೊಳಗೆ ಕಾಣೊ
ಹುಚ್ಚುತನವಿದು ಎನ್ನಬೇಡ ಹೆಚ್ಚು ಚಿಂತೆಯ ಮಾಡಬೇಡ
ಅಚ್ಚುಮೆಚ್ಚಿನ ದಿವ್ಯಮೂರುತಿ ಗುರುವರನ ನೀ ದೂರಬೇಡ ||೧||

ವ್ಯರ್ಥವಲ್ಲವೊ ಗುರುವಿನಾ ಸೇವೆ
ಬಹುತೀರ್ಥಯಾತ್ರೆಯ ಫಲವು ಇಹುದಿದರೊಂದರಿಂದಲೆ 
ಸ್ವಾರ್ಥ ಕೂಡಿದ ಅರ್ಥದಾಸೆಯ ಬಿಟ್ಟು ಗುರುಪಾದವನೆ ಹೊತ್ತು
ಕೃತಾರ್ಥನಾಗೊ ಧರ್ಮ ಮಾರ್ಗವ ತೋರೊ ಸದ್ಗುರುವ ನಂಬಿ||೨||

ವೈಭವದ ಆಡಂಬರವ ಬಿಟ್ಟೂ
ಮನ ಮಂದಿರದೊಳು ಗುರುಪಾದವನೇ ಇಟ್ಟು
ಸ್ಥಿತಿ ಗತಿ ಮತಿ ನೀನೇ ದೇವಾ ನೀನೆ ಎಮಗೆ ಮಹಾದೇವಾ
ಎಂದು ಮೊರೆಯಾ ಹೊಕ್ಕಿದಾಕ್ಷಣ ಹತ್ತಿರಕೆ ಬಂದು ಸಲಹುವನು ||೩||

ಸಖರಾಯಪುರದೊಳಿರುವವನಾ
ನಿಜಸುಖ ನೀಡುತಾ ಭಕುತರೆಲ್ಲರ ಪೊರೆದಿಹನಾ
ಅಂಬಾಸುತನ ಅಂತರಂಗದಿ ಆನಂದದ ರೂಪ ಧರಿಸಿ
ವೇಂಕಟಾಚಲನೆಂಬೊ ನಾಮದಿ ಹರಸುತಿಹ ಅವಧೂತನ ಸೇವೆಯು ||೪||

No comments:

Post a Comment