ಒಟ್ಟು ನೋಟಗಳು

Friday, April 27, 2018

ಗುರುನಾಥ ಗಾನಾಮೃತ 
ಕರುಣೆಯಿಂದ ಧರಣಿ ಆಳಿದ ಸದ್ಗುರು ಮಹಾರಾಜ
ರಚನೆ: ಆನಂದರಾಮ್, ಶೃಂಗೇರಿ  


ಕರುಣೆಯಿಂದ ಧರಣಿ ಆಳಿದ ಸದ್ಗುರು ಮಹಾರಾಜ
ಸಖರಾಯಪುರವೆಂಬ ಪುಣ್ಯ ಭೂಮಿಯಲಿ ಜನಿಸಿದ|

ನಿಜ ಬಕುತರ ಸಲಹುತಾ ನಿಜಾನಂದ ನೀಡುತಲಿ
ದೇಹಿ ಎಂದವರ ಕೈ ಬಿಡದೇ ನಿತ್ಯವೂ ಹರಸುತಲಿ|

ಸಾಧಕರ ಹುಡುಕತಲಿ ಬಳಿ ಬಂದವರ ಕರುನಿಸುತ 
ನಿತ್ಯ ಸತ್ಯದಾ ಅರಿವ ತೋರುತ  ಸರಿದಾರಿ ತೋರುತ|

ವಿಧಿಯ ಅರಿವು ಮೂಡಿಸುತ ಎಲ್ಲರ ಎಚ್ಚರಿಸುತ
ಅಹಂ ತೊರೆದು ಬಾಳಿ ದಿನದ ಬದುಕು ನಡೆಸೆನ್ನುತ|

ಗುರುವಿನ ಅರಿವು ಕಡು ಪಾಪಿಗೂ ಗದರಿ ನೀಡುತ
ತನ್ನ ಇರುವು ಕಾಲಾತೀತವೆಂದು ನಿತ್ಯವೂ ಸಾರುತ|

ದತ್ತನೂ ನೀವೇ ಸದ್ಗುರುವೂ ನೀವೇ ಎಂದೆನುತ
ನಿಮ್ಮ ಪಾದಕೆ ನನ್ನ ಶಿರವಿತ್ತು ನಿತ್ಯವೂ ನಮಿಸುತ|

No comments:

Post a Comment