ಒಟ್ಟು ನೋಟಗಳು

Friday, April 27, 2018

ಗುರುನಾಥ ಗಾನಾಮೃತ 
ಸರ್ವಾಂತರ್ಯಾಮಿಯು ನೀನು  ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಸರ್ವಾಂತರ್ಯಾಮಿಯು ನೀನು  ಗುರುವೇ
ಸರ್ವರ ಉದ್ದಾರಕನು ನೀನೇ ಗುರುವೇ
ಎನ್ನ ಉದ್ಧರಿಸಿ ಹರಸೋ ನನ್ನ ಗುರುವೇ|
                                              
ನೀನರಿಯದ ಮನವು ಇರುವುದೇ ಗುರುವೇ
ನಿನ್ನರಿವೇ ನಮ್ಮ ಉಸಿರಾಗಿರಲಿ ಗುರುವೇ
                                                  
ಸರ್ವ ರೋಗ ನಿವಾರಕನು. ನೀನೇ ಗುರುವೇ
ಸರ್ವ ದುರಿತ ನಿವಾರಕನು ನೀನೇ ಗುರುವೇ

ಸರ್ವ ದುಃಖ ನಿವಾರಕ ಸರ್ವ ವಿಘ್ನ ನಾಶಕ
ಸರ್ವ ಬಂದ ನಿವಾರಕನು ನಮ್ಮ ಗುರುವೇ
ಸರ್ವ ವಿದ್ಯೆ ದಾಯಪಾಲಕ ನೀನೇ ಗುರುವೇ
ನೀನರಿಯದ ವಿಷಯ ಇರುವುದೇ ಗುರುವೇ

ಸರ್ವ ವಂಚಿತ ಬಕುತನ ನೀ ಹರಸು ಗುರುವೇ
ಸರ್ವ  ಸಂಗ ಪರಿತ್ಯಾಗಿ ನೀನಲ್ಲವೇ ಗುರುವೇ

ವಿಷಯಾಸಕ್ತಿಗಳ   ಮೋಹ ಬಿಡಿಸು ಗುರುವೇ
ಸರ್ವ ಭ್ರಮೆಯ ಸುಳಿಯಿಂದ ಬಿಡಿಸು ಗುರುವೇ

No comments:

Post a Comment