ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 24
ಬೆನ್ನು ತೊಳೆಸಿಕೊಂಡ ಭಗವಂತ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಬೆಂಗಳೂರಿನ ಭಕ್ತೆಯೊಬ್ಬರಿಗೆ ಗುರುನಾಥರನ್ನು ನೋಡುವ ಹಂಬಲವಾಯಿತು. ಗಂಡ, ಹೆಂಡತಿ, ಮಗಳು, ಅಳಿಯಂದಿರು ಒಡಗೂಡಿ ಗುರುನಾಥರನ್ನು ನೋಡಲು ಸಖರಾಯಪಟ್ಟಣಕ್ಕೆ ಹೊರಟರು. ಹಿಂದಿನ ರಾತ್ರಿಯೇ ಪೂರ್ವ ಸಿದ್ಧತೆಗಳಾದವು. ಗುರುವನ್ನು ನೋಡಲು ಹೋಗುವುದೆಂದರೆ ಅದೊಂದು ಸಂಭ್ರಮ. ಹಾಗಾಗಿ ಅದೂ ಇದೂ ಕೈಗೆ ಸಿಕ್ಕಿದ್ದನ್ನೆಲ್ಲಾ ಜೋಡಿಸಿಕೊಂಡರು. ಗುಳಪಾವಟೆ ಮಾಡಿಕೊಂಡರು. ಬೆಳಗ್ಗೆದ್ದು ಬಸ್ಸು ಹಿಡಿದು ಸಖರಾಯಪಟ್ಟಣ ತಲುಪಿದ ಇವರಿಗೆ ಗುರು ಮನೆ ಎದುರು ಹೋದಾಗ ಅದೇನೋ ಭಣ ಭಣ ಅನುಮಾನಪಡುತ್ತಾ ಒಳಹೋಗುವುದೋ ಬೇಡವೋ ಎಂದಿವರು ಚಿಂತಿಸತೊಡಗಿದರು. ಗುರುನಾಥರು ಊರಿನಲ್ಲಿದ್ದರೆಂದರೆ ಊರಿನ ಕಳೆಯೇ ಬೇರೆ. ಅವರ ಮನೆ ಮುಂದಂತೂ ಜನಗಳ ಸಂತೆ. ಒಳಗೆ ಊಟ ತಿಂಡಿಗಳ ಸರಬರಾಜು.
ಬಿಕೋ ಎನ್ನುತ್ತಿದ್ದ ವಾತಾವರಣದಲ್ಲೂ ಗುರು ಮನೆಯನ್ನು ಭಕ್ತಿಯಿಂದ ಪ್ರವೇಶಿಸಿದ ಇವರಿಗೆ ನಿರಾಸೆ ಕದಿತ್ತು. ಗುರುನಾಥರು ಊರಲಿಲ್ಲ ಎಂಬ ವಿಚಾರ ತಿಳಿಯಿತು. ಒಳಗಿನಿಂದ ಬಂದವರು ಕಾಫಿ ಸರಬರಾಜು ಮಾಡಿದರು. ನಾಲಿಗೆಗೊಂದಿಷ್ಟು ಚೈತನ್ಯ ಬಂದರೂ ಗುರುದರ್ಶನವಾಗಲಿಲ್ಲವೆಂಬ ಚಿಂತೆ ಕಾಡುತ್ತಿತ್ತು.
ತ್ರಿಲೋಕ ಸಂಚಾರಿಗೆ ನಾವೊಬ್ಬರೇ ಭಕ್ತರೇ? ಎಲ್ಲ ಭಕ್ತರ ಯೋಗಕ್ಷೇಮದ ಹೊರೆ ಹೊತ್ತ ಗುರುನಾಥರು ನಮ್ಮ ಬಳಿ ಮಾತ್ರವೇ ಇರಬೇಕು, ನಮಗೆ ಬಂದಾಗಲೆಲ್ಲಾ ಸಿಗಬೇಕೆಂದು ಆಶಿಸುವುದಾದರೂ ಎಷ್ಟರ ಮಟ್ಟಿನ ನ್ಯಾಯ ಹೇಳಿ... ಆದರೆ ದೂರದ ಬೆಂಗಳೂರಿನಿಂದ ಬಂದ ಇವರು ಬಹಳ ವಿಚಾರಿಸಿದಾಗ ಚಿಕ್ಕಮಗಳೂರಿಗೆ ಹೋಗಿದ್ದಾರೆಂದು ತಿಳಿಯಿತು. ಚಿಕ್ಕಮಗಳೂರಿನ ಎಲ್ಲ ಪರಿಚಿತರಿಗೆ ಫೋನು ಮಾಡಿದರೂ ಯಾರೂ ಎತ್ತುತ್ತಲೇ ಇಲ್ಲ. ಕೊನೆಗೆ ರವಿ ಎಂಬುವರು 'ಗುರುನಾಥರು ಶೆಟ್ಟರ ಮನೆಯಲ್ಲಿರಬಹುದೆಂದು' ಕ್ಲೂ ನೀಡಿದರು.
ನಾಲ್ಕು ಜನ ಮತ್ತೆ ತಾವು ತಂದ ವಸ್ತುಗಳನ್ನೆಲ್ಲಾ ಹೊತ್ತು ಚಿಕ್ಕಮಗಳೂರಿಗೆ ಹೋಗಿ ರವಿ ತಿಳಿಸಿದ ಗುರುಭಕ್ತರ ಮನೆಗೆ ಹೋದಾಗ ಭಾರಿ ಭಾರಿ ಜನಗಳೇ ಅಲ್ಲಿ ಸೇರಿದ್ದರು. ರುದ್ರ ಪಠಣ ನಡೆಯುತ್ತಿತ್ತು. ಸಂತಸಗೊಂಡ ಆ ಬೆಂಗಳೂರಿನ ಭಕ್ತೆ ಪಾರ್ವತಕ್ಕನವರಿಗೆ ಆದ ಸಂತಸವನ್ನು ಪ್ರಿಯ ಗುರುಬಾಂಧವರೇ ಅಕ್ಕನವರ ಮಾತುಗಳಲ್ಲೇ ಕೇಳೋಣ.
"ಅಂತೂ ನಮ್ಮಪ್ಪ, ಗುರುನಾಥ ನಮಗೆ ಸಿಕ್ಕೇಬಿಟ್ಟ. ದರ್ಶನ ಪಡೆದು ನಮ್ಮ ಆಯಾಸವೆಲ್ಲಾ ದೂರವಾಯಿತು. ಅಂತೂ ಎಲ್ಲರ ಮಧ್ಯೆ ನಾವೂ ಹೋಗಿ ಒಳಗೆ ಕುಳಿತೆವು. ಗುರು ನಮ್ಮವನೆಂದರೂ ಅವನ ದರ್ಶನವಾಗಲು ಅದೆಷ್ಟು ಒದ್ದಾಡಬೇಕೆಂದು ಅರಿವಾಯಿತು. ಆದರೂ ಅವನನ್ನು ನೋಡಬೇಕೆಂಬ ಹಠ ಇದ್ದರೆ ದರ್ಶನ ಕೊಟ್ಟೇ ಕೊಡುತ್ತಾನೆಂಬ ಸತ್ಯದ ಅರಿವಾಗಿತ್ತು. ನಿನ್ನೆಯೇ ಹೊರಡುವ ತಾರಾತುರಿಯಲ್ಲಿಯೇ ಪಾದ ಪೂಜೆ ಮಾಡಲು ವಸ್ತ್ರ, ವಿಭೂತಿ, ಹೂವುಗಳನ್ನು ತಂದಿದ್ದೆ. ಗುರು ಮನೆಯಲ್ಲಿ ದೇವರು ಪಠಗಳಿಗೆ ಹೂವು ಹಾಕಿಬಿಟ್ಟಿದ್ದೆವು. ಉಳಿದುದನ್ನೇ ಗುರುನಾಥರ ಪೂಜೆಗೆ ಅರ್ಪಿಸಲು ನಿಧಾನವಾಗಿ ಅವರು ಕುಳಿತ ಜಾಗಕ್ಕೆ ಹೋದೆ. ಕಾಲಿನ ಬಳಿ ತಟ್ಟೆ ಇಟ್ಟು ನೀರು ಸುರಿದು ಪಾದ ತೊಳೆದೆವು. ವಿಭೂತಿಯನ್ನು ಕಾಲಿಗೆ, ಮೈಗೆ, ಹಣೆಗೆ ಲೇಪಿಸಿದೆವು. ನಾವು ತಂದಿದ್ದ ವಸ್ತ್ರವನ್ನು ಹೊದೆಸಿದೆ. ನಮ್ಮಪ್ಪ ಭೋಳೆ ಶಂಕರನಾಗಿದ್ದ ಅವತ್ತು. ಏನೂ ಒಂದು ಚೂರೂ ವಿರೋಧಿಸದೇ ಎಲ್ಲವನ್ನೂ ಪ್ರೀತಿಯಿಂದ ಸ್ವೀಕರಿಸಿದರು. ಮುಂದೆ ಗುಳುಪಾವಟೆ, ಬೇಸನ್ ಲಾಡುಗಳನ್ನು ತಂದಿದ್ದೆ. ತಿನ್ನಿಸಿದೆ ಗುರುನಾಥರಿಗೆ. ತಿಂದ ನಮ್ಮಪ್ಪ. ಆರತಿ ಎತ್ತಿ ಧನ್ಯರಾದೆವು. ನಾವು ಬಂದ ಕೆಲಸವಾಯಿತು. ಆದರೆ ಅದ್ಯಾವಾಗ ನಮ್ಮ ಗುರುನಾಥರು ಏನೇನು ಮಾಡುತ್ತಾರೋ, ಅದೆಲ್ಲಿಂದ ಸೃಷ್ಟಿ ಮಾಡಿಬಿಡುತ್ತಾರೋ, ನಮ್ಮನ್ನು ಕುರ್ಚಿಯ ಮೇಲೆ ಕೂರಲು ಹೇಳಿದರು. ಸೀರೆ ಕುಪ್ಪಸಗಳೆಲ್ಲಾ ಬಂದವು. ನಮ್ಮ ಪಾದ ಪೂಜೆಗೆ ಸಿದ್ಧತೆ ನಡೆಸಿದ್ದು ಕಂಡು ಬಂತು. ನಾನಾಗ ಸೀರೆಗೀರೆ ಎಲ್ಲಾ ಬೇಡಪ್ಪಾ... ಬೇಕಾದಷ್ಟು ಕೊಟ್ಟಿದ್ದೀಯಾ ಮತ್ತೀಗ್ಯಾಕೆ? ಎಂದಾಗ 'ಹಾಗಾದರೆ ಸೀರೆ ಬೇಡವೋ?' ಎಂದು ಅವರು ಕೇಳಿದಾಗ ನಾನು ಸುಮ್ಮನಾಗಿಬಿಟ್ಟೆ. ನಾವು ಮಾಡಿದ್ದನ್ನೆಲ್ಲಾ ತಾಳ್ಮೆಯಿಂದ ಸ್ವೀಕರಿಸಿದ ಗುರುನಾಥರಿಗೆ ಎದುರಾಡುವ ಧೈರ್ಯ ನನ್ನಲ್ಲಿರಲಿಲ್ಲ. ಒಳಗೆ ದೇವರ ಮನೆಗೆ ಹೋಗಿ ನಾನು, ನನ್ನ ಮಗಳು ಹೊಸ ಸೀರೆಯುಟ್ಟುಕೊಂಡು ಬಂದೆವು. ಮುಂದೆಲ್ಲಾ ಗುರುನಾಥರ ಆಜ್ಞೆಯಂತೆಯೇ ಎಲ್ಲಾ ನಡೆಯಿತು. ಕಣ್ಣು ಮುಚ್ಚಿ ಅವನನ್ನು ಧ್ಯಾನಿಸುತ್ತಾ ಎಲ್ಲಾ ಸ್ವೀಕರಿಸುವುದೊಂದೇ ನಮಗುಳಿದ ದಾರಿಯಾಗಿತ್ತು. ಗುರುನಾಥರು ಒಂದು ಕುರ್ಚಿಯನ್ನು ನಮ್ಮ ಎಡಗಡೆಗೆ ಹಾಕಿಸಿಕೊಂಡು ತಮ್ಮ ಕೈಯಾರೆ ನನಗೆ ತಿನ್ನಿಸಿದರು. ನಾನು ಅವರ ಬಾಯಿಗೆ ತಿನ್ನಿಸಿದೆ. ನನ್ನ ತಲೆ ಮೈಕೈಗಳನ್ನೆಲ್ಲಾ ಸವರಿ ಅದೇನೇನು ಹರಸಿದರೋ, ಅಂದು ನಾಗರ ಪಂಚಮಿಯಾಗಿತ್ತು. ಗುರುನಾಥರು ನನ್ನಣ್ಣನಾಗಿಬಿಟ್ಟರು. ನನ್ನ ಕೈಯಿಂದ ಬೆನ್ನು ತೊಳೆಸಿಕೊಂಡರು. ನಾನು ಅವರ ಬೆನ್ನು ತೊಳೆದೆ. ಎಂತಹ ಅದೃಷ್ಟ ನನ್ನದು. ಗುರುವಾಗಿ ಬಂಧುವಾಗಿದ್ದ ಗುರುನಾಥರು ತಾನಾರೆಂಬುದನ್ನು ಇನ್ನೂ ಹತ್ತಿರದ ಸಂಬಂಧ ತೋರಿಸಿದರು. ನಿರಂತರ ನನ್ನನ್ನ ಜೋಪಾನವಾಗಿ ಕಾಯುವ ಅಣ್ಣನಾದರು. ಇಂದೂ ಈ ತಂಗಿ ಆ ಗುರುವಿನ ಕೃಪಾಛತ್ರದಲ್ಲಿ ಆನಂದವಾಗಿ ಬಾಳುತ್ತಿದ್ದೇನೆ. ನಮ್ಮಪ್ಪ ಗುರುನಾಥ ನನಗೆ ಶಂಕರಲಿಂಗನಾಗಿ... ಗುರುನಾಥನಾಗಿ ನನ್ನ ಕಾಯುವ ಅಣ್ಣನಾಗಿ.. ಏನೇನು ಕರುಣಿಸಿದ್ದಾನೆ ನೋಡಿ... ಅದೇ ನನ್ನನ್ನು ಎಂಬತ್ತೈದರ ಮುದಿ ವಯಸ್ಸಿನಲ್ಲಿಯೂ ಸಂತಸವಾಗಿ ನೆಮ್ಮದಿಯಿಂದ ಬಾಳಿಸಿದೆ" ಎಂದು ಹೃದಯ ತುಂಬಿ ನುಡಿಯುತ್ತಾರೆ.
ಗುರು ಬಾಂಧವರೇ, ಬೆಂಗಳೂರಿನಂತಹ ಕಾಂಕ್ರೀಟು ಕಾಡಿನಲ್ಲಿ ಈ ವಯಸ್ಸಿನಲ್ಲಿಯೂ ಏಕಾಂಗಿಯಾಗಿ ದೃಢಚಿತ್ತ, ಆನಂದದಲ್ಲಿ ಅವರೇ ಅವರಾಗಿ ಬಾಳುವುದನ್ನು ನೋಡಬೇಕು. ಗುರು ನಾಮವೇ ಅವರ ಊರುಗೋಲು, ಗುರುನಾಥರ ಸ್ಮರಣೆಯೇ ಅವರ ಸಂಸಾರ. ಯಾವ ಚಿಂತೆ, ಭಯ, ಏಕಾಂಗಿತನ ಅವರ ಹತ್ತಿರ ಸುಳಿದಿಲ್ಲ. ಬಂದ ಗುರು ಭಕ್ತರನ್ನೆಲ್ಲಾ ಗುರುನಾಥರ ಸ್ವರೂಪದಲ್ಲಿ ಕಾಣುವ ಈ ಅಜ್ಜಿ ನಮಗೊಂದು ಮಾರ್ಗದರ್ಶಿ ಎಂದರೆ ತಪ್ಪಲ್ಲ. ಪ್ರಿಯ ಗುರು ಬಂಧು ನಿತ್ಯ ಸತ್ಸಂಗಾಭಿಮಾನಿಗಳೇ, ನಿತ್ಯ ನಿತ್ಯವೂ ಇಂತಹ ಹೊಸ ಹೊಸ ವಿಚಾರಗಳು, ಗುರುನಾಥ ಸದ್ಭಕ್ತರ ಅನುಭವ ಭಂಡಾರದಿಂದ ನಮಗೆ ಒದಗಿ ಬರುತ್ತಲೇ ಇದೆ. ನಾಳೆಯೂ ಬನ್ನಿ ನಮ್ಮೊಂದಿಗೆ ಇದ್ದು ಗುರುನಾಥ ಸತ್ ಕಥಾಮೃತವನ್ನು ಸವಿಯೋಣ.

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment