ಶ್ರೀ ಗುರುಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 50
ಹರಿಸಿ ಮ್ಲೇಚ್ಛಾಧಿಪನ ಕುರುವನು । ಪುರಕೆ ತೆರಳುತ ಯವನರಾಜನ ।
ವರವನೈವತ್ತರಲಿ ಕೊಟ್ಟನು ಯವನ ರಾಜನಿಗೆ || 50 ||
ಹಿಂದೆ ಅಗಸನಿಗೆ ರಾಜ ಪದವಿಯನ್ನು ಗುರುಗಳು ಅನುಗ್ರಹಿಸಿದ್ದರು. ಮ್ಲೇಚ್ಛ ರಾಜನಾಗಿ ಬೀದರ್ ನಲ್ಲಿ ಜನಿಸಿ, ಮೆರೆದ ಅವನಿಗೆ ಒಂದು ಕುರು ಉಂಟಾಗಿ ಭಾರಿ ಬಾಧೆಯನ್ನು ಅನುಭವಿಸಿದನು. ಪುರೋಹಿತರು ಸದ್ಗುರುವಿನ ದರ್ಶನದಿಂದ ಇದು ದೂರವಾಗುತ್ತದೆ. ಅಂತಹ ಸದ್ಗುರುವು ಗಾಣಗಾಪುರದಲ್ಲಿ ಇದ್ದಾರೆ ಎಂದಾಗ ತನ್ನ ದಳ ಬಲಸಹಿತ, ಮ್ಲೇಚ್ಛ ರಾಜನು ಗುರುದರ್ಶನಕ್ಕೆ ಬರುತ್ತಾನೆ. ರಾಜನನ್ನು ಕಂಡು ಗುರುಗಳು "ಏನಪ್ಪಾ ಅಗಸ ರಾಜನಾಗುವ ಆಸೆ ತೀರಿತೆ?" ಎಂದಾಗ - ಪೂರ್ವಜನ್ಮದ ನೆನಪಾಗಿ, "ಗುರುವೇ ನಿಮ್ಮ ದರ್ಶನವನ್ನು ನನಗೆ ಕೊಡಬೇಕೆಂದು ಬೇಡಿ" ಗುರುವಿಗೆ ತನ್ನ ಮನೆಗೊಯ್ದು ಆದರ ಆತಿಥ್ಯಗಳನ್ನು ಮಾಡುವ ರಾಮಣೀಯಕ ವಿಷಯವೇ ಐವತ್ತನೆಯ ಅಧ್ಯಾಯ.
ಮುಂದುವರಿಯುವುದು...
No comments:
Post a Comment