ಗುರುನಾಥ ಗಾನಾಮೃತ
ಬೇಗನೇ ಬಾರೋ ಗುರುದೇವಾ
ರಚನೆ: ಅಂಬಾಸುತ
ಬೇಗನೇ ಬಾರೋ ಗುರುದೇವಾ
ತಡವೇತಕಿನ್ನೂ ತರಳನ ಮೊರೆ ಕೇಳಿಯೂ ||ಪ||
ಧರಣಿಯೊಳಗೆ ಬಂದು ದುಖದ ಕಹಿಯುಂಡೂ
ಬಳಲಿಹೆನೋ ನಾನೂ ಅತೀ ಹೀನ ಮಾನವಾ
ಪಾರುಗಾಣಿಸುವರಾ ಕಾಣೆನಯ್ಯಾ ಇನ್ನೂ
ನಿನ್ನಾ ಬಿಟ್ಟೂ ಈ ಜಗದೊಳಗೇ ||೧||
ಮಾತಾಪಿತರು ಸತಿ ಸುತ ಬಾಂಧವರೂ
ಸುತ್ತಿಹರು ಸಂಕೋಲೆ ಬಿಡಿಸಲಾಗದಂತೇ
ಬಿಡುಗಡೆಯಾ ಬೇಡಿಹೆನೋ ನಿನ್ನಾ ಕಾಣಲೆಂದೇ
ದಾಸತ್ವವಾದರೂ ಸರಿ ನಿನ್ನಡಿಯೊಳಿರಿಸಲೂ ||೨||
ಸಖರಾಯಪುರವಾಸ ಸದ್ಗುರುನಾಥಾ
ಶ್ರೀ ವೇಂಕಟಾಚಲನೆಂಬೋ ಪರಮಾತ್ಮಾ
ಅಂಬಾಸುತನಾ ಅನವರತ ಪೋಷಿಸಲೂ
ತಡಮಾಡದೇ ಇನ್ನೂ ಧಡಧಡನೇ ಇಳಿದೂ ||೩||
No comments:
Post a Comment