ಶ್ರೀ ಗುರುಚರಿತ್ರೆ
(ಸಾರಾಧ್ಯಾಯ ಸಂಗ್ರಹಿತ ರೂಪ)
ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ
ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)
ಅಧ್ಯಾಯ - 45
ಕರಗಿ ಕುಷ್ಟದಿ ಬಂದು ತುಳಜಾಪುರದಿ ಸಾಗಿದೆ ಬರಲು ಶ್ರೀಗುರು ।
ವರನು ನಲವತ್ತೈದರಲಿ ಕುಷ್ಟವನು ಹರಸಿದನು || 45 ||
ನಂದಿ ಎಂಬ ಬ್ರಾಹ್ಮಣನೊಬ್ಬನಿಗೆ ಕುಷ್ಟ ಬಾಧೆ ಶುರುವಾಯಿತು. ಆತನು ತುಳಜಾಪುರಕ್ಕೆ ಹೋಗಿ ತಪವ ಮಾಡಿದನು. ಸ್ವಪ್ನದಲ್ಲಿ 'ನೀನು ಚಂದಲಾ ಪರಮೇಶ್ವರಿಯ ಬಳಿ ಹೋಗು' ಎಂದು ಆಜ್ಞೆಯಾಗಿ ಅಲ್ಲಿ ಬಂದು ಸೇವೆ ಮಾಡಲು, 'ನೀನು ಗಾಣಗಾಪುರಕ್ಕೆ ಹೋಗು. ಅಲ್ಲಿ ನಿನ್ನ ಕುಷ್ಟ ಪರಿಹಾರವಾಗುವುದು' ಎಂದು ದೇವಿ ಆಜ್ಞೆ ಮಾಡಿದಳು. ದೇವತೆಗಳಿಂದ ಆಗದ್ದು ಮಾನವನಿಂದ ಆಗುವುದೇ ಎಂಬ ಅನುಮಾನದಿಂದ ಗಾಣಗಾಪುರಕ್ಕೆ ಬಂದು ಗುರುವನ್ನು ಕಂಡಾಗ 'ದೇವತೆಯಿಂದ ಆಗದ್ದಕ್ಕೆ ಮಾನವನ ಬಳಿ ಏಕೆ ಬಂದೆ' ಎಂದು ಆತನ ಮನದ ಮಾತುಗಳನ್ನು ಗುರುಗಳು ಅಡಿದಾಗ ನಂದಿಯ ಮನಸ್ಸಿಗೆ ಗುರು ಪ್ರಭಾವದ ಅರಿವಾಗಿ ಭಕ್ತಿಯಿಂದ ಗುರುಸ್ತುತಿ ಮಾಡಲು ಕುಷ್ಟ ನಿವಾರಣೆಯಾದ ಕಥೆಯೇ ನಲವತ್ತೈದನೆಯ ಅಧ್ಯಾಯ.
ಮುಂದುವರಿಯುವುದು...
No comments:
Post a Comment