ಒಟ್ಟು ನೋಟಗಳು

Thursday, June 29, 2017

ಶ್ರೀ ಗುರುಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 49


ಬಳಿಕ ಸಂಗಮದಷ್ಟತೀರ್ಥಂಗ । ಳನ್ನು ತೋರಿಸಿ ತಂಗಿ ಕುಷ್ಠವ ।
ತೊಳೆದ ನಲವತ್ತೊಂಬತ್ತರಲೈ ಮಹಿಮೆಯಗಣಿತವು    || 49 ||

ಗಾಣಗಾಪುರದಲ್ಲಿ ಶ್ರೀ ಗುರುಗಳು ತಮ್ಮ ಭಕ್ತರಿಗೆ ಅಲ್ಲಿಯೇ ವಿರಾಜಮಾನವಾದ ಎಂಟು ತೀರ್ಥಕ್ಷೇತ್ರಗಳನ್ನು ತೋರಿಸಿ ಅವುಗಳ ಮಹಿಮೆಯನ್ನು ತಿಳಿಸುತ್ತಾರೆ. ಭೀಮ, ಅಮರಜಾ ನದಿಯಲ್ಲಿ ಷಟ್ಕುಲ ತೀರ್ಥ, ನರಸಿಂಹ ತೀರ್ಥ, ಭಾಗೀರಥಿ ತೀರ್ಥ, ಪಾಪ ವಿನಾಶಿನೀ ತೀರ್ಥ, ಕೋಟಿ ತೀರ್ಥ, ರುದ್ರಪಾದ ತೀರ್ಥ, ಚಕ್ರ ತೀರ್ಥ, ಮನ್ಮಥ ತೀರ್ಥ ಹೀಗೆ ಎಂಟು ಸ್ನಾನಗಳಲ್ಲಿ ಗಾಣಗಾಪುರದಲ್ಲಿರುವ ಈ ತೀರ್ಥಗಳ ಮಹಾಪಾಪ ವಿನಾಶಕಾರಕಗಳು. ಕುಷ್ಠರೋಗದಿಂದ ಬಳಲುತ್ತಿದ್ದ ತಂಗಿ ರತ್ನಾಬಾಯಿಗೆ ಈ ತೀರ್ಥಗಳಲ್ಲಿ ಸ್ನಾನ ಮಾಡಲು ತಿಳಿಸಿ ಪಾಪ ಮುಕ್ತರಾಗಿಸುತ್ತಾರೆ. ಸದ್ಭಕ್ತಿಯಿಂದ ಭಾವಿಸುವವರಿಗೆ ಶ್ರೀ ಗುರುಚರಣವೇ ಸರ್ವತೀರ್ಥ ಸಮಾನವು. ಹೀಗೆ ಮನೆಯ, ನಿಮ್ಮ ಊರಲ್ಲೇ ಇಷ್ಟೆಲ್ಲಾ ತೀರ್ಥಗಳಿರುವಾಗ ಆಯಾಸ ಪಡುವಿರೇಕೆ ಎಂದು ಗುರುಗಳು ಕರುಣೆಯಿಂದ ತಿಳಿಸುವ ಕಥೆಯೇ ನಲವತ್ತೊಂಬತ್ತನೆಯ ಅಧ್ಯಾಯ. 

ಮುಂದುವರಿಯುವುದು...

No comments:

Post a Comment