ಒಟ್ಟು ನೋಟಗಳು

Friday, June 23, 2017

ಶ್ರೀ ಗುರುಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 43


ವರದಶ್ರೀ ಮದನಂತ ವ್ರತವನು । ಗುರುವು ಸಾಯಂದೇವಗರುಹುತ  ।
ಭರದೊಳದ ಮಾಡಿಸಿದನೈ ನಲವತ್ತಮೂರರಲಿ || 43 ||

ಸಾಯಂದೇವನಿಗೆ ಗುರುಗಳು ಹೀಗೆ ಹೇಳುತ್ತಾರೆ. ಆದಿಯಲ್ಲಿ ಧರ್ಮರಾಯನು ಅನಂತವ್ರತವನ್ನಾಚರಿಸಿ ರಾಜ್ಯ ಪಡೆದನು. ಭಾದ್ರಪದ ಶುಕ್ಲ ಚತುರ್ದಶಿಯ ದಿನ ಈ ವ್ರತವನ್ನಾಚರಿಸಬೇಕು. ಎಲ್ಲ ವ್ರತಗಳಿಗೆ ಉತ್ತಮವಾದುದು ಅನಂತವ್ರತ. ಮುಂದೆ ಕೌಂಡಿನ್ಯ ಮುನಿಯು ಸುಮಂತನ ಮನೆಗೆ ಬಂದಾಗ ಶೀಲೆಯನ್ನು ಮದುವೆಯಾಗಿ ಪತಿಯ ಆಶ್ರಮಕ್ಕೆ ಹೋಗುವಾಗ, ದಾರಿಯಲ್ಲಿ ವನಿತೆಯರು ಮಾಡುತ್ತಿದ್ದ ಅನಂತ ವ್ರತವನ್ನು ತಾನೂ ಆಚರಿಸಿ ರಾಜಪದವಿ ಪಡೆದದ್ದು - ಮುಂದೆ ಮದಾಂಧನಾಗಿ ಅನಂತ ದೋರವನ್ನು ಬೆಂಕಿಗೆ ಎಸೆದ ಪರಿಣಾಮ ಅನೇಕ ದುಃಖಗಳಿಗೆ ಒಳಗಾಗಿ ಕೊನೆಗೆ ಅಡವಿಯಲ್ಲಿ ವೃದ್ಧ ಬ್ರಾಹ್ಮಣ ವೇಷದಲ್ಲಿ ಅನಂತನನ್ನು ಕಂಡಿದ್ದನ್ನು ತಿಳಿಸುತ್ತಾ, ಗುರುಗಳು ಸಾಯಂದೇವನಿಂದ ಚತುರ್ದಶಿಯ ದಿನ ಅನಂತ ವ್ರತವನ್ನು ಮಾಡಿಸಿ, ಜೀವನ ಸಾರ್ಥಕ ಮಾಡಿಸಿದ ಗುರುಕೃಪೆಯೇ ನಲವತ್ತಮೂರನೆಯ ಅಧ್ಯಾಯ. 

ಮುಂದುವರಿಯುವುದು...

No comments:

Post a Comment