ಒಟ್ಟು ನೋಟಗಳು

Tuesday, June 27, 2017

ಶ್ರೀ ಗುರುಚರಿತ್ರೆ 


(ಸಾರಾಧ್ಯಾಯ ಸಂಗ್ರಹಿತ ರೂಪ)


ಮೂಲ ಲೇಖಕರು: ನಿಪ್ಪಾಣಿಯ ಗುರುಚರಣ ಸದ್ಭಕ್ತ ಶ್ರೀ.ವಿಷ್ಣು ಶರ್ಮ 


ಭಾವಾನುವಾದ: ಶ್ರೀ.ಎಸ್. ದತ್ತಾತ್ರಿ (ಭಗವಾನ್)

 ಅಧ್ಯಾಯ - 47


ಶರಣರಲಿ ದೀಪಾವಳಿಯ ದಿನ ತೆರಳಿದನು ತಾನೆಂಟು ದೇಶಕೆ ।
ಗುರುವು ನಲವತ್ತೇಳರಲಿ ಮಾಡಿದನು ಚೋದ್ಯವನು  || 47 ||

ಗುರುಗಳು ಗಾಣಗಾಪುರದಲ್ಲಿ ಇರುವಾಗ ದೀಪಾವಳಿಯು ಸನ್ನಿಹಿತವಾಗಿ, ಏಳು ಊರಿನ ಏಳು ಶಿಷ್ಯರು ಗುರುಗಳು ದೀಪಾವಳಿಗೆ ತಮ್ಮಲ್ಲಿಗೆ ಬರಬೇಕೆಂದು ಬೇಡುತ್ತಾರೆ. ಊರವರು ಗುರುಗಳು ತಮ್ಮ ಊರಿನಲ್ಲೇ ಇದ್ದು ಹಬ್ಬವನ್ನು ಆಚರಿಸಬೇಕೆಂದು ಬೇಡಿದಾಗ, ಭಕ್ತರ ಆಶಯ ಮನ್ನಿಸಿ ಒಬ್ಬೊಬ್ಬರನ್ನೇ ಕರೆದು ಗುಟ್ಟಿನಲ್ಲಿ "ನಿಮ್ಮೂರಿಗೆ ಬರುತ್ತೇನೆ" ಎಂದು ಹೇಳಿ ಕಳುಹಿಸುತ್ತಾರೆ. ಹಬ್ಬ ಕಳೆದ ಕಾರ್ತಿಕ ಹುಣ್ಣಿಮೆಗೆ ಎಲ್ಲ ಭಕ್ತರೂ ಬಂದು ಸೇರಿದಾಗ ಗುರು ಮಠದಲ್ಲಿ, ಗುರುಗಳಿಗೆ ಎಲ್ಲ ಊರಿನ ಭಕ್ತರುಗಳು ಕೊಟ್ಟ ವಸ್ತುಗಳನ್ನು ಅಲ್ಲಿ ಕಂಡು ವಿಸ್ಮಿತರಾಗಿ ನಮ್ಮ ಊರಿಗೆ ಗುರುಗಳು ಬಂದಿದ್ದರೆಂದು ಎಲ್ಲರು ಎನ್ನುತ್ತಾರೆ. ಅಪರಿಮಿತವಾದ ಶಕ್ತಿಯ ಗುರುವಿಗೆ ಅಸಾಧ್ಯವಾದದ್ದು ಏನೂ ಇಲ್ಲ ಎಂಬುದನ್ನು ತಿಳಿದ ಭಕ್ತರು ಸದ್ಗುರುವಿನ ಬಗ್ಗೆ ಮತ್ತೂ ಶ್ರದ್ಧಾ ಭಕ್ತಿಗಳನ್ನು ಹೊಂದುವುದೇ ನಲವತ್ತೇಳನೇ ಅಧ್ಯಾಯದ ಸಾರವಾಗಿದೆ. 

ಮುಂದುವರಿಯುವುದು...

No comments:

Post a Comment