ಗುರುನಾಥ ಗಾನಾಮೃತ
ಬಾರೈ ಬಾರೈ ಗುರುದೇವಾ
ರಚನೆ: ಅಂಬಾಸುತ
ಬಾರೈ ಬಾರೈ ಗುರುದೇವಾ
ತವ ಚರಣವ ತೋರೈ ಗುರುದೇವಾ
ಬುಧಜನವಂದಿತ ಗುರುದೇವಾ
ಬೋಧಸ್ವರೂಪಾ ಗುರುದೇವಾ ||
ಹಗಲಿರುಳೆನ್ನದೆ ನಿಮ್ಮನೆ ಭಜಿಪೆವು
ತವ ಮಹಿಮಾವಳಿಗಳಾ ಪಾಡುತಿಹೆವೂ
ಕಾಯೈ ಕಾಯೈ ಎನ್ನುತ ಬೇಡುತಿಹೆವೋ
ತಾಯಿಯೇ ನೀನು ಎಂದು ನಂಬಿಹೆವೋ ||
ಮಲ್ಲಿಗೆ ಸಂಪಿಗೆ ಮನಕುಸುಮಗಳಾ
ನಿನ್ನಡಿಗಿಡಲೈ ತಂದಿಹೆವೋ
ತುಪ್ಪದ ಆರತಿ ತಪ್ಪದೇ ಮಾಡುವೆವೋ
ಅಪ್ಪ ನೀನೇ ಹರಿ ಹರ ಎನ್ನುವೆವೋ ||
ತಲೆಯ ಮೇಲೆ ಹೊತ್ತು ತಿರುಗುವೆವೋ ನಿನ್ನಾ
ತೊಟ್ಟಿಲ ಒಳಗಿಟ್ಟು ಲಾಲಿಯ ಹಾಡುತಾ
ಮಲಗು ಮಲಗಯ್ಯಾ ಎನ್ನುವೆವೋ ||
ಅಂಬಾಸುತನ ನಿಜದೈವವೇ ನೀನಯ್ಯಾ
ಕಾಪಿಟ್ಟು ಬಾರೋ ಕರುಣೆಯ ತೋರೋ
ಕಂದನ ಸಲಹಲು ಓಡೋಡಿ ಬಾರಯ್ಯಾ ||
No comments:
Post a Comment